ADVERTISEMENT

‘ಸರೋಜಿನಿ ನಾಯ್ಡು‘ ಬಯೋಪಿಕ್‌ ಚಿತ್ರಕ್ಕೆ ಕನ್ನಡಿಗ ವಿನಯ್‌ ಚಂದ್ರ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 6:22 IST
Last Updated 7 ಏಪ್ರಿಲ್ 2022, 6:22 IST
ಪೋಸ್ಟರ್‌
ಪೋಸ್ಟರ್‌   

ಬೆಂಗಳೂರು:‘ಭಾರತದ ಕೋಗಿಲೆ‘ ಖ್ಯಾತಿಯ ಸರೋಜಿನಿ ನಾಯ್ಡು ಅವರ ಜೀವನಾಧಾರಿತ ಸಿನಿಮಾವನ್ನು ಕನ್ನಡಿಗ, ಸಂಗೀತ ನಿರ್ದೇಶಕ ವಿನಯ್ ಚಂದ್ರ ನಿರ್ದೇಶನ ಮಾಡುವ ಮೂಲಕ ಬಾಲಿವುಡ್‌ಗೆ ಪ್ರವೇಶ ಮಾಡುತ್ತಿದ್ದಾರೆ.

ಇದು ಪ್ಯಾನ್‌ ಇಂಡಿಯಾ ಸಿನಿಮಾವಾಗಿದೆ. ತೆಲುಗು, ಹಿಂದಿ, ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಮಲಯಾಳಂ, ತಮಿಳು ಭಾಷೆಗಳಿಗೂ ಸಿನಿಮಾ ಡಬ್‌ ಆಗಲಿದೆ ಎಂದು ವರದಿಯಾಗಿದೆ.

ಕೋಸ್ಟಲ್‌ವುಡ್‌ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಸೋನಲ್ ಮೊಂತೆರೋ, ಸರೋಜಿನಿ ನಾಯ್ಡು ಅವರು ಯುವತಿಯಾಗಿದ್ದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಶಾಂತಿ ಪ್ರಿಯಾ ಅವರು ಸರೋಜಿನಿ ನಾಯ್ಡು ಅವರು ಮಧ್ಯ ವಯಸ್ಕರಾಗಿದ್ದಹಾಗೂ ಹಿರಿಯರಾಗಿದ್ದಪಾತ್ರವನ್ನು ಮಾಡಲಿದ್ದಾರೆ.

ADVERTISEMENT

ಈಗಾಗಲೇ ಸಿನಿಮಾದ ಹೆಸರು ಹಾಗೂಫಸ್ಟ್‌ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ಸರೋಜಿನಿ‘ ಎಂದು ಹೆಸರಿಡಲಾಗಿದೆ.ಸರೋಜಿನಿ ಸಿನಿಮಾದ ಚಿತ್ರೀಕರಣ ಜೂನ್‌ನಲ್ಲಿ ಆರಂಭವಾಗಲಿದ್ದು, ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿ ಹಾಗೂ ಬೆಂಗಳೂರು, ಕೊಡಗಿನಲ್ಲೂ ಕೆಲವು ಪ್ರದೇಶಗಳಲ್ಲಿ ಶೂಟಿಂಗ್ ನಡೆಯಲಿದೆ ಚಿತ್ರತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.