ADVERTISEMENT

ನಟಿ ಶ್ರೀದೇವಿಯ ಫೋಟೊ ಹಂಚಿಕೊಂಡ ಪತಿ ಬೋನಿ ಕಪೂರ್‌

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 13:12 IST
Last Updated 19 ಜನವರಿ 2022, 13:12 IST
ಶ್ರೀದೇವಿ
ಶ್ರೀದೇವಿ   

ದಿವಂಗತ ನಟಿ ಶ್ರೀದೇವಿ ಅವರ ಫೋಟೊವನ್ನು ಪತಿ ಬೋನಿ ಕಪೂರ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೆಲವು ತಿಂಗಳ ಹಿಂದಷ್ಟೆ ಇನ್‌ಸ್ಟಾಗ್ರಾಂ ಖಾತೆ ತೆರೆದಿರುವ ಬೋನಿ ಕಪೂರ್‌ ಇದೀಗ ಶ್ರೀದೇವಿ ಅವರ ಅಪರೂಪದ ಫೋಟೊ ಶೇರ್‌ ಮಾಡಿದ್ದಾರೆ.

2012ರಲ್ಲಿ,ಲಖನೌದಲ್ಲಿ ದುರ್ಗಾ ಪೂಜೆ ನಡೆದಿದ್ದ ಸಂದರ್ಭದಲ್ಲಿ ತೆಗೆದ ಫೋಟೊವನ್ನು ಅವರು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಶ್ರೀದೇವಿ ಬಿಳಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬೆನ್ನಿನ ಮೇಲೆ ಬೋನಿ ಎಂದು ಕುಂಕುಮದಲ್ಲಿ ಬರೆಯಲಾಗಿದೆ.

ADVERTISEMENT

ಮೈಮಾಟ ಹಾಗೂ ವಿಭಿನ್ನ ಅಭಿನಯದ ಮೂಲಕ ಶ್ರೀದೇವಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಅವರು ದುಬೈನಲ್ಲಿ ಬಾತ್​ಟಬ್​ನಲ್ಲಿ ಮುಳುಗಿ ಮೃತಪಟ್ಟಿದ್ದರು.

ಶ್ರೀದೇವಿ ಅವರಿಗೆ ಜಾಹ್ನವಿ ಹಾಗೂ ಖುಷಿ ಎಂಬ ಇಬ್ಬರು ಹೆಣ್ಣು ಮಕ್ಕಳು. ಈಗಾಗಲೇ ಜಾಹ್ನವಿ ಕಪೂರ್‌ ಬಾಲಿವುಡ್‌ ಸ್ಟಾರ್‌ ಆಗಿದ್ದಾರೆ.ಪತಿಬೋನಿ ಕಪೂರ್‌ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.