
ಬಾರ್ಡರ್ 2 ಸಿನಿಮಾ ನೋಡಲು ಟ್ರಾಕ್ಷ್ರರ್‌ನಲ್ಲಿ ಆಗಮಿಸುತ್ತಿರುವ ಅಭಿಮಾನಿಗಳು
ಬಾಲಿವುಡ್ ನಟ ಸನ್ನಿ ಡಿಯೋಲ್ ಅಭಿನಯದ ‘ಬಾರ್ಡರ್–2’ ಸಿನಿಮಾ ಜನವರಿ 23ರಂದು ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಡುವೆ ಚಿತ್ರಮಂದಿರಗಳಿಗೆ ಅಭಿಮಾನಿಗಳು ಟ್ರಾಕ್ಟರ್ ಮೂಲಕ ಆಗಮಿಸುತ್ತಿದ್ದಾರೆ.
ಸೈನಿಕ ಕಾರ್ಯಚರಣೆ ಕುರಿತ ಚಿತ್ರಕಥೆ ಒಳಗೊಂಡಿರುವ ‘ಬಾರ್ಡರ್–2’ ಸಿನಿಮಾ ನೋಡಲು ಬರುತ್ತಿರುವ ಅಭಿಮಾನಿಗಳು ಚಿತ್ರದ ಪೋಸ್ಟರ್ ಹಾಗೂ ಧ್ವಜ ಹಿಡಿದು ಟ್ರಾಕ್ಟರ್‌ಗಳಲ್ಲಿ ಚಿತ್ರಮಂದಿರಗಳ ಕಡೆಗೆ ಬರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
1997ರಲ್ಲಿ ತೆರೆಕಂಡ 'ಬಾರ್ಡರ್" ಚಿತ್ರವನ್ನು ಅನುರಾಗ್ ಸಿಂಗ್ ನಿರ್ದೇಶಿಸಿದ್ದರು. ಇದರ ಮುಂದುವರಿದ ಭಾಗ 'ಬಾರ್ಡರ್ 2' ಟಿ-ಸೀರೀಸ್ ಮತ್ತು ಜೆಪಿ ಫಿಲ್ಸ್ ನಿರ್ಮಿಸಿರುವ ಸಿನಿಮಾವನ್ನು ಜೆ. ಪಿ. ದತ್ತಾ ಅವರು ನಿರ್ದೇಶಿಸಿದ್ದಾರೆ.
'ಬಾರ್ಡರ್ 2' ಚಿತ್ರದಲ್ಲಿ ಸನ್ನಿ ಡಿಯೋಲ್, ಸುನೀಲ್ ಶೆಟ್ಟಿ, ಜಾಕಿ ಶ್ರಾಫ್ ಮತ್ತು ಅಕ್ಷಯ್ ಖನ್ನಾ, ವರುಣ್ ಧವನ್, ದಿಶ್ಚಿತ್ ದೋಸಾಂಜ್ ಮತ್ತು ಸೋನಮ್ ಬಾಜ್ವಾ ಅವರು ನಟಿಸಿದ್ದಾರೆ.
ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ₹32.10 ಕೋಟಿ ನಿವ್ವಳ ಗಳಿಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.