
ಪಿಟಿಐ
ನವದೆಹಲಿ: ಹನುಮಾನ್ ಖ್ಯಾತಿಯ ನಟ ತೇಜ್ ಸಜ್ಜಾ ಅಭಿನಯದ ಹೊಸ ಚಿತ್ರ ‘ಮಿರಾಯ್: ಸೂಪರ್ ಯೋಧ’ ಸಿನಿಮಾವು ಬಿಡುಗಡೆಯಾದ ಮೊದಲ ದಿನವೇ ಜಗತ್ತಿನಾದ್ಯಾಂತ ಬಾಕ್ಸ್ ಆಫೀಸ್‌ನಲ್ಲಿ ₹27.20 ಕೋಟಿ ಗಳಿಸಿದೆ.
ಶುಕ್ರವಾರ(ಸೆ.12) ಬಿಡುಗಡೆಯಾಗಿರುವ ಮಿರಾಯ್ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ಹಂಚಿಕೊಂಡಿದೆ.
ಕಾರ್ತಿಕ್ ಗಟ್ಟಮ್ನೇನಿ ನಿರ್ದೇಶನದ ಮಿರಾಯ್ ಚಿತ್ರದಲ್ಲಿ ಮಂಚು ಮನೋಜ್, ಜಯರಾಮ್, ಶ್ರಿಯಾ ಶರಣ್, ಜಗಪತಿ ಬಾಬು, ರಿತಿಕಾ ನಾಯಕ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಲಿವುಡ್‌ನ ಮಿರಾಯ್ ಸಿನಿಮಾವು ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ, ಬಂಗಾಳಿ, ಮರಾಠಿ ಹಾಗೂ ಚೀನಿ ಭಾಷೆಯಲ್ಲಿ ಬಿಡುಗಡೆಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.