ADVERTISEMENT

ರಮ್ಯಾ ಔಟ್‌ ರಶ್ಮಿ ಇನ್‌!

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 16:06 IST
Last Updated 18 ಆಗಸ್ಟ್ 2023, 16:06 IST
ರಶ್ಮಿ ಗೌತಮ್
ರಶ್ಮಿ ಗೌತಮ್   

ನಿತಿನ್‌ ಕೃಷ್ಣಮೂರ್ತಿ ನಿರ್ದೇಶನದ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾ 25 ದಿನ ಪೂರೈಸಿ ಹೊರ ರಾಜ್ಯಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಸಿನಿಮಾ ತೆಲುಗಿಗೆ ‘ಬಾಯ್ಸ್ ಹಾಸ್ಟೆಲ್’ ಎಂಬ ಹೆಸರಿನಲ್ಲಿ ಡಬ್‌ ಆಗುತ್ತಿದ್ದು, ಸಿನಿಮಾ ಇದೇ 26ಕ್ಕೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ರಿಲೀಸ್ ಆಗಲಿದೆ.

ಈಗಾಗಲೇ ‘ಪ್ರೊಟೆಸ್ಟ್‌ ಸಾಂಗ್‌’ ಡಬ್‌ ಆಗಿ ರಿಲೀಸ್‌ ಆಗಿದ್ದು, ಚಿತ್ರತಂಡ ಇದೇ ಸಂದರ್ಭದಲ್ಲಿ ಹೊಸ ಅಪ್‌ಡೇಟ್‌ ನೀಡಿದೆ. ಸಿನಿಮಾದಲ್ಲಿ ನಟಿ ರಮ್ಯಾ ಮಾಡಿದ್ದ ಲೆಕ್ಚರರ್ ಪಾತ್ರವನ್ನು ತೆಲುಗಿನಲ್ಲಿ ನಟಿ, ನಿರೂಪಕಿ ರಶ್ಮಿ ಗೌತಮ್ ಮಾಡಲಿದ್ದಾರೆ.

ಚಾಯ್ ಬಿಸ್ಕೆಟ್ ಫಿಲ್ಮ್ಸ್ ಮತ್ತು ಅನ್ನಪೂರ್ಣ ಸ್ಟುಡಿಯೋಸ್ ಜಂಟಿಯಾಗಿ ತೆಲುಗಿನಲ್ಲಿ ‘ಬಾಯ್ಸ್ ಹಾಸ್ಟೆಲ್’ ಶೀರ್ಷಿಕೆಯಡಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿವೆ. ಕನ್ನಡದಲ್ಲಿ ಈ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಪಿಕ್ಚರ್ಸ್ ಬ್ಯಾನರ್‌ ಅಡಿ ಪ್ರೆಸೆಂಟ್ ಮಾಡಿದ್ದಾರೆ. ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಗುಲ್ಮೋಹರ್ ಫಿಲ್ಮ್ಸ್ ಮತ್ತು ವರುಣ್ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.