ADVERTISEMENT

ಶಶಾಂಕ್‌–ಡಾರ್ಲಿಂಗ್‌ ಕೃಷ್ಣ ಕಾಂಬಿನೇಷನ್‌ನಲ್ಲಿ ‘ಬ್ರ್ಯಾಟ್‌’

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 12:35 IST
Last Updated 31 ಮಾರ್ಚ್ 2025, 12:35 IST
ಮಂಜುನಾಥ್ ಕಂದಕೂರ್, ಶಶಾಂಕ್‌, ಮನಿಶಾ, ಡಾರ್ಲಿಂಗ್‌ ಕೃಷ್ಣ  
ಮಂಜುನಾಥ್ ಕಂದಕೂರ್, ಶಶಾಂಕ್‌, ಮನಿಶಾ, ಡಾರ್ಲಿಂಗ್‌ ಕೃಷ್ಣ     

‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದ ಬಳಿಕ ನಿರ್ದೇಶಕ ಶಶಾಂಕ್‌ ಹಾಗೂ ನಟ ಡಾರ್ಲಿಂಗ್‌ ಕೃಷ್ಣ ‘ಬ್ರ್ಯಾಟ್‌’ ಎಂಬ ಪ್ಯಾನ್‌ ಇಂಡಿಯಾ ಚಿತ್ರದ ಮೂಲಕ ಮತ್ತೆ ಜೊತೆಯಾಗುತ್ತಿದ್ದಾರೆ. 

‘ಫಸ್ಟ್ ರ‍್ಯಾಂಕ್ ರಾಜು’ ಸಿನಿಮಾ ನಿರ್ಮಾಣ ಮಾಡಿದ್ದ ಮಂಜುನಾಥ್ ಕಂದಕೂರ್ ಅವರು ನಿರ್ಮಾಣ ಮಾಡುತ್ತಿರುವ ಈ  ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. 

‘ಶಶಾಂಕ್ ಅವರು ಈವರೆಗೂ ನಿರ್ದೇಶಿಸದ ಹೊಸ ವಿಷಯ ಹಾಗೂ ನಾನು ಕೂಡ ಈವರೆಗೂ ನಿಭಾಯಿಸಿದ ಹೊಸ ಪಾತ್ರ ಈ ಚಿತ್ರದಲ್ಲಿದೆ. ಕನ್ನಡದಲ್ಲಿ ತೀರ ಅಪರೂಪವಾದ ಕಥಾಹಂದರ ಹೊಂದಿರುವ ಚಿತ್ರವಿದು. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ನಾಯಕಿಯಾಗಿ ಮನಿಶಾ ನಟಿಸಿದ್ದಾರೆ’ ಎಂದರು ಡಾರ್ಲಿಂಗ್ ಕೃಷ್ಣ.

ADVERTISEMENT

‘ಅತಿ ಹೆಚ್ಚು ತರಲೆ ಮಾಡುವ ಹುಡುಗರನ್ನು ‘ಬ್ರ್ಯಾಟ್’ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಶೀರ್ಷಿಕೆ ಇಡೋಣ ಎಂದುಕೊಂಡು ನೋಡಿದಾಗ ಈಗಾಗಲೇ ಬಂದಿರುವ ಚಿತ್ರಗಳ ಟೈಟಲ್‌ಗಳೇ ದೊರೆತವು. ಕನ್ನಡ ಸೇರಿದಂತೆ ಐದು‌ ಭಾಷೆಗಳಲ್ಲಿ ಈ ಸಿನಿಮಾ ಬರುತ್ತಿರುವ ಕಾರಣ ‘ಬ್ರ್ಯಾಟ್’ ಶೀರ್ಷಿಕೆಯೇ ಸರಿ ಎನಿಸಿತು. ನಾನು ಈವರೆಗೂ ಮಾಡಿರದ ಜಾನರ್‌ನ ಚಿತ್ರವಿದು. ಇದು ಅಪ್ಪ-ಮಗನ ಸಂಘರ್ಷ. ಅಪ್ಪನಿಗೆ ಮಗನೇ ‘ಬ್ರ್ಯಾಟ್’. ಅಪ್ಪನ ಪಾತ್ರದಲ್ಲಿ ಅಚ್ಯುತ್‌ ಕುಮಾರ್ ಅಭಿನಯಿಸಿದ್ದಾರೆ. ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಭಿಲಾಷ್ ಕಲ್ಲತ್ತಿ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ’ ಎಂದು ಮಾಹಿತಿ ನೀಡಿದರು ಶಶಾಂಕ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.