ADVERTISEMENT

ಗಿಟಾರ್‌ ಕಲಿಯುತ್ತಿರುವ ಬುರ್ಲಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 3:38 IST
Last Updated 11 ಜೂನ್ 2020, 3:38 IST
   

‘ರಾಧಾ ಸರ್ಚಿಂಗ್‌ ರಮಣ ಮಿಸ್ಸಿಂಗ್‌’ ಚಿತ್ರಕ್ಕಾಗಿ ಬುಲೆಟ್‌ ಬೈಕ್‌ ರೈಡಿಂಗ್‌ ಕಲಿತಿದ್ದರು ನಟಿ ಸಂಜನಾ ಬುರ್ಲಿ. ಈಗ ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಗಿಟಾರ್‌ ನುಡಿಸುವುದನ್ನು ಕಲಿತ್ತಿದ್ದಾರಂತೆ. ಹಾಗೆಯೇ ಕಾಂಟೆಂಪರರಿ ಡಾನ್ಸ್‌ಗಳನ್ನೂಅಭ್ಯಾಸ ಮಾಡುತ್ತಿದ್ದಾರಂತೆ.

ಬುರ್ಲಿ ನಾಯಕಿಯಾಗಿರುವ ‘ರಾಧಾ ಸರ್ಚಿಂಗ್‌ ರಮಣ ಮಿಸ್ಸಿಂಗ್‌’ ಚಿತ್ರ ಪೂರ್ಣಗೊಂಡಿದೆ. ಮೇ ಅಥವಾ ಜೂನ್‌ನಲ್ಲಿ ತೆರೆಗೆ ಬರಬೇಕಾಗಿದ್ದ ಈ ಚಿತ್ರ ಲಾಕ್‌ಡೌನ್‌ ಕಾರಣಕ್ಕಾಗಿಯೇ ನೆನೆಗುದಿಗೆ ಬಿದ್ದಿದೆ.

ಈ ಚಿತ್ರದಲ್ಲಿರಾಧೆಯಾಗಿ ಬುರ್ಲಿ ಕಾಣಿಸಿಕೊಂಡರೆ, ಸೆಲೆಬ್ರಿಟಿ ಫೋಟೊಗ್ರಾಫರ್‌ ರಾಘವ್ ರಮಣನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.ನಿರ್ದೇಶಕ ಎಂ.ಎನ್‌. ಶ್ರೀಕಾಂತ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.ಯಶ್‌ ಎಂಬುವವರು ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ವಿಶ್ವಜಿತ್ ರಾವ್‌,ಕೊರಿಯೊಗ್ರಫಿ ಹರಿ ಮತ್ತು ಕಲೈ ಮಾಸ್ಟರ್‌,ಸಾಹಿತ್ಯಸಂತೋಷ್‌ ನಾಯಕ್‌ ಅವರದು. ಗಾಯಕ ಸೋನು ನಿಗಂ, ಅನುರಾಧಾ ಭಟ್‌ ಹಾಗೂ ನವೀನ್‌ ಸಜ್ಜು ಈ ಚಿತ್ರಕ್ಕಾಗಿ ಹಾಡಿದ್ದಾರೆ.

ADVERTISEMENT

ನಾಲ್ಕನೇ ಸೆಮಿಸ್ಟರ್‌ ಎಂಜಿನಿಯರಿಂಗ್‌ ಓದುತ್ತಿರುವ ಬುರ್ಲಿ, ಈ ಚಿತ್ರದಲ್ಲೂಎಂಜಿನಿಯರಿಂಗ್‌ ವಿದ್ಯಾರ್ಥಿನಿಯ ಪಾತ್ರವನ್ನೇ ನಿಭಾಯಿಸುತ್ತಿದ್ದಾರೆ. ‘ನನ್ನ ಪಾತ್ರಕ್ಕೆ ಎರಡು ಶೇಡ್‌ಗಳಿವೆ. ಪವರ್‌ಫುಲ್‌ ಹುಡುಗಿಯ ಪಾತ್ರಕ್ಕಾಗಿ ಬುಲೆಟ್‌ ಚಲಾಯಿಸುವುದನ್ನು ಕಲಿತುಕೊಂಡೇ. ನನಗೆ ಗಿಟಾರ್‌ ಕಲಿಯಬೇಕೆನ್ನುವ ಆಸೆ ಮೊದಲಿನಿಂದಲೂ ಇತ್ತು. ಅದನ್ನು ಈಗ ಈಡೇರಿಸಿಕೊಂಡೆ. ಹಾಗಂಥ ಗಿಟಾರ್‌ ನುಡಿಸುವಿಕೆಯಲ್ಲಿ ಪರಿಣತಿ ಸಾಧಿಸಿದ್ದೇನೆ ಎಂದಲ್ಲ, ಕಲಿಕೆ ನಿರಂತರ’ಎನ್ನಲು ಅವರು ಮರೆಯಲಿಲ್ಲ.

‘ಕೊರೊನಾ ಕಾಲದಲ್ಲಿ ಫ್ಯಾಮಿಲಿ ಬಾಂಡೇಜ್‌ ಹೆಚ್ಚಾಯಿತು. ಜತೆಗೆಸ್ನೇಹಸಂಬಂಧಗಳ ಮೌಲ್ಯವೂ ಹೆಚ್ಚು ಅರ್ಥವಾಯಿತು. ನಮ್ಮ ನಿಜವಾದ ಸ್ನೇಹಿತರು, ಹಿತೈಷಿಗಳು ಯಾರೆನ್ನುವುದನ್ನು ಈ ಕೊರೊನಾ ಕಾಲ ಪ್ರತಿಯೊಬ್ಬರಿಗೂಮನದಟ್ಟು ಮಾಡಿಕೊಟ್ಟಿದೆ’ಎನ್ನುವ ಮಾತು ಸೇರಿಸಿದರು.

ಬುರ್ಲಿ ಕೈಯಲ್ಲಿ ಸದ್ಯ ಅರವಿಂದ್‌ ಕೌಶಿಕ್‌ ನಿರ್ದೇಶನದ‘ಸ್ಟೀಲ್‌ ಪಾತ್ರೆ ಸಾಮಾನು’,ಸೂರಜ್‌ ಶೆಟ್ಟಿ ನಾಯಕನಾಗಿರುವ ‘ನಾನ್‌ವೆಜ್‌’, ತಮಿಳಿನ‘ಚೂಮಂದ್ರಗಾಳಿ’ ಚಿತ್ರಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.