ADVERTISEMENT

‘ಚಿಟ್ಟೆ’ಯ ಸೈಕಲ್‌ ಸವಾರಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 19:30 IST
Last Updated 2 ಫೆಬ್ರುವರಿ 2020, 19:30 IST
ಪರೂಲ್‌ ಯಾದವ್‌
ಪರೂಲ್‌ ಯಾದವ್‌   

ನಟಿ ಪಾರುಲ್‌ ಯಾದವ್‌ ಅವರು ಕಬ್ಬನ್‌ ಪಾರ್ಕಿನಲ್ಲಿ ಬೆಳ್ಳಂಬೆಳಿಗ್ಗೆತಮ್ಮ ಮುದ್ದಿನ ಸಾಕು ನಾಯಿ ಪಮೊರಿಯನ್‌ ಕೂರಿಸಿಕೊಂಡು ಸೈಕಲ್‌ ಮೇಲೆ ಜಾಲಿ ರೈಡ್‌ ಮಾಡಿದ್ದಾರೆ.

ಕಪ್ಪು ಪ್ಯಾಂಟ್‌, ಪಟ್ಟೆಪಟ್ಟೆಯ ಕುರ್ತಾ ಧಾರಿಯಾಗಿ, ನೀಲಿ ಬಣ್ಣದ ಸೈಕಲ್‌ ಏರಿಟ್ರ್ಯಾಕ್‌ನಲ್ಲಿ ಸ್ವಚ್ಛಂದ ಸವಾರಿ ನಡೆಸುತ್ತಿದ್ದ ಪಾರುಲ್‌ ಅವರನ್ನು ಕಂಡಾಗ ವಾಯುವಿಹಾರಿಗಳಿಗೂ ಅಚ್ಚರಿ. ಕೆಲವರು ಬಿಟ್ಟಕಣ್ಣು ಬಿಟ್ಟಂತೆ ಬೆರಗಿನಿಂದ ಈಚೆಲುವೆಯನ್ನು ಕಣ್ತುಂಬಿಕೊಂಡರು. ಇನ್ನು ಕೆಲವರುಯಾವುದೋ ಚಿತ್ರದ ಶೂಟಿಂಗ್‌ ನಡೆಯುತ್ತಿರಬಹುದೆಂದುಕುತೂಹಲದಿಂದ ನಿಂತು ನೋಡುತ್ತಿದ್ದರು.

ಜಾಲಿ ಮೂಡಿನಲ್ಲಿ, ಹಾಡು ಗುನುಗಿಕೊಂಡು ಸೈಕಲ್‌ ಸವಾರಿ ನಡೆಸಿರುವ 13 ಸೆಕೆಂಡ್‌ಗಳ ವಿಡಿಯೊ ಒಂದನ್ನು ಪಾರುಲ್‌ ತಮ್ಮ ಟ್ವಿಟರ್‌ ಖಾತೆಯಲ್ಲೂ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಈ ವಿಡಿಯೊಗೆ ‘ಈ ಕ್ಷಣಕ್ಕೆ ಸಂತೋಷವಾಗಿರಿ. ಈ ಕ್ಷಣ ನಿಮ್ಮ ಜೀವನ – ಉಮರ್ ಖಯ್ಯಾಮ್‌’ ರುಬಾಯತ್‌ ಒಂದನ್ನು ಅಡಿ ಟಿಪ್ಪಣಿ ನೀಡಿ ಗಮನ ಸೆಳೆದಿದ್ದಾರೆ.

ADVERTISEMENT

ಹಿಂದಿಯ ‘ಕ್ವೀನ್‌’ ಚಿತ್ರದ ಕನ್ನಡ ರೂಪ ‘ಬಟರ್‌ಫ್ಲೈ’ ಚಿತ್ರದಲ್ಲಿಪಾರುಲ್ ಗೋಕರ್ಣದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ನಟ ರಮೇಶ್ ಅರವಿಂದ್ ಅವರ ನಿರ್ದೇಶನದಲ್ಲಿ ಈ ಚಿತ್ರ ಕನ್ನಡ ಸೇರಿ ನಾಲ್ಕು ಭಾಷೆಗಳಲ್ಲಿ ಸಿದ್ಧವಾಗಿದೆ. ಇದು ಪಾತರಗಿತ್ತಿಯಂತೆ ಸ್ವಚ್ಛಂದವಾಗಿ ಹಾರಲು ಬಯಸುವ ಹೆಣ್ಣಿನ ಕಥೆಯ ಚಿತ್ರ. ಹಿಂದಿಯಲ್ಲಿ ಕಂಗನಾ ರನೋಟ್ ನಿಭಾಯಿಸಿದ್ದ ಪಾತ್ರವನ್ನು ಕನ್ನಡದಲ್ಲಿಪಾರುಲ್ ನಿಭಾಯಿಸಿದ್ದಾರಂತೆ.ಪಾರುಲ್ ಕನ್ನಡದಲ್ಲಿ ಈವರೆಗೆ ಇಂಥ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.