ADVERTISEMENT

ಅವಳಿ–ಜವಳಿಯ ಥ್ರಿಲ್ಲರ್ ಅನುಭವ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 19:30 IST
Last Updated 28 ಏಪ್ರಿಲ್ 2020, 19:30 IST
ಮನು ಮಿಲನ್, ರಿಷಿತಾ ಮಲ್ನಾಡ್‌, ಮಧು ಮಿಥುನ್‌
ಮನು ಮಿಲನ್, ರಿಷಿತಾ ಮಲ್ನಾಡ್‌, ಮಧು ಮಿಥುನ್‌   

ಅವಳಿ–ಜವಳಿ ಮಕ್ಕಳು ಬದುಕಿನಲ್ಲಿ ಎದುರಿಸುವ ಬವಣೆಯ ನೈಜ ಕಥೆ ಹೇಳಲಿದೆಯಂತೆ ‘ಬೈ 1 ಗೆಟ್‌ 1 ಫ್ರೀ’ ಚಿತ್ರ. ಇದರ ಮೋಷನ್ ಪೋಸ್ಟರ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಸಸ್ಪೆನ್ಸ್‌ ಮತ್ತು ಥ್ರಿಲ್ಲರ್ ಚಿತ್ರ ಇದು.

ಮೈಸೂರಿನ ಅವಳಿ–ಜವಳಿಗಳಾದ ಮಧು ಮಿಥುನ್ ಮತ್ತು‌ ಮನು ಮಿಲನ್ ಈ ಚಿತ್ರದ ನಾಯಕರು. ನಟ ಕಿಶೋರ್‌ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರದ್ದು ಇದರಲ್ಲಿ ಅಂಚೆಯಣ್ಣ ಮನ್ಮಥನ ಪಾತ್ರವಂತೆ. ಅವರ ಪಾತ್ರವೇ ಚಿತ್ರದ ಕೇಂದ್ರಬಿಂದು. ನಾಯಕಿಯಾಗಿರಿಷಿತಾ ಮಲ್ನಾಡ್‌ ಮತ್ತುಕಿಶೋರ್‌ಗೆ ಜೋಡಿಯಾಗಿರೋಹಿಣಿ ತೆಲ್ಕರ್ ನಟಿಸಿದ್ದಾರೆ.

ಹರೀಶ್ ಅನಿಲ್ಗೋಡ್ ಇದಕ್ಕೆ ಆ್ಯಕ್ಷನ್‌ ಕಟ್ ಹೇಳಿದ್ದಾರೆ.‘ನೋಎಂಟ್ರಿ’ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಅವರ ಬೆನ್ನಿಗಿದೆ. ಹರೀಶ್‌ಚಿತ್ರಕಥೆಯ ಹೊಣೆಯನ್ನು ನಿಭಾಯಿಸಿದ್ದಾರೆ. ಎಸ್‌ಬಿಎಸ್‌ಸಿ ಕ್ರಿಯೇಷಯ್ಸ್‌ನಡಿ ಮಧುರಾಜ್‌ ಸಿ. ಬಂಡವಾಳ ಹೂಡಿದ್ದಾರೆ.

ADVERTISEMENT

‘ಸಿನಿಮಾ ಬಹುತೇಕ ಶೂಟಿಂಗ್‌ ಮುಗಿದಿದೆ. ಮೈಸೂರು, ಬೆಂಗಳೂರು, ಮುರುಡೇಶ್ವರದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ನೆಗೆಟಿವ್‌ ಮತ್ತು ಪಾಸಿಟಿವ್‌ಶೇಡ್‌ಗಳಲ್ಲಿ ನಾವಿಬ್ಬರು ಕಾಣಿಸಿಕೊಂಡಿದ್ದೇವೆ. ಕೊರೊನಾ ಭೀತಿ ಕಡಿಮೆಯಾದರೆ ಮೇ ತಿಂಗಳಲ್ಲಿ ಚಿತ್ರದ ಟೀಸರ್ ಮತ್ತು ಹಾಡುಗಳು ಬಿಡುಗಡೆಗೆ ತೀರ್ಮಾನಿಸಿದ್ದೇವೆ. ಚಿತ್ರೋದ್ಯಮದ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿದರೆ ಜುಲೈನಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆಯಿದೆ’ ಎನ್ನುತ್ತಾರೆ ನಟಮನು ಮಿಲನ್.

ಪರದೆ ಮೇಲೆ ಈ ಕಥೆಯನ್ನು ನಿರೂಪಿಸಿರುವುದು ಧ್ರುವ ಸರ್ಜಾ ಮತ್ತು ವಿಜಯ ರಾಘವೇಂದ್ರ. ಸಂಗೀತ ನಿರ್ದೇಶನ ದಿನೇಶ್‌ ಕುಮಾರ್‌ ಅವರದ್ದು. ಅಭಿಷೇಕ್‌ ಪಾಂಡೆ ಮತ್ತು ವಿಶ್ವಜಿತ್‌ ರಾವ್‌ ಅವರ ಛಾಯಾಗ್ರಹಣವಿದೆ. ತ್ರಿಭುವನ್‌ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ. ಸಾಹಸ ಥ್ರಿಲ್ಲರ್‌ ಮಂಜು, ವೈಲೆಂಟ್‌ ವೇಲು ರಮೇಶ್ ಅವರದ್ದು. ಸುರೇಶ್ ಅರ್ಮುಗಂ ಸಂಕಲನ ನಿರ್ವಹಿಸಿದ್ದಾರೆ. ವಿಜಯ್‌ ಪ್ರಕಾಶ್‌,ಅನನ್ಯ ಭಟ್, ಸ್ನೇಹಾ, ಸಂಜು ಬಸ್ರೂರ್, ಶರತ್‌‌‌ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಉಷಾ ಭಂಡಾರಿ, ವಿಶಾಲ್‌ ಹೆಗ್ಡೆ, ಮಂಜುನಾಥ್‌, ಗೌರೀಶ್‌ ಅಕ್ಕಿ, ಬಾಲರಜವಾಡಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.