‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ರಾಧಾಕೃಷ್ಣ ಪಲ್ಲಕ್ಕಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಜೊತೆಗೆ ಅವರೇ ಬಂಡವಾಳವನ್ನೂ ಹೂಡಿದ್ದಾರೆ. ‘ಕೋಟೆ ನಾಡಿನ ನಾಗರಹಾವು’ ಎಂಬ ಅಡಿಬರಹವಿದೆ.
‘ಚಿತ್ರದುರ್ಗದ ನಾಯಕರುಗಳ ಚರಿತ್ರೆ ಕಥೆಯಲ್ಲಿ ಸಣ್ಣದಾಗಿ ಬಂದು ಹೋಗುತ್ತವೆ. ಹೀಗಾಗಿ ಕೋಟೆ ಆಸುಪಾಸಿನಲ್ಲಿ ಚಿತ್ರೀಕರಿಸಲಾಗಿದೆ. ಬೆಂಗಳೂರು, ಬಾದಾಮಿ, ಬನಶಂಕರಿ, ಐಹೊಳೆ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ವಿಷ್ಣುವರ್ಧನ್ ಹುಟ್ಟುಹಬ್ಬದಂದು ಚಿತ್ರ ತೆರೆಗೆ ತರುವ ಯೋಜನೆ ಇತ್ತು. ಆದರೆ ಈಗಾಗಲೇ ಹತ್ತು ಸಿನಿಮಾಗಳು ಆ ವಾರ ಬಿಡುಗಡೆಯಾಗಿವೆ. ಹೀಗಾಗಿ ಸೆ.18ರಂದು ಮೈಸೂರು, ಚಿತ್ರದುರ್ಗ, ಶಿವಮೊಗ್ಗದಲ್ಲಿ ವಿಷ್ಣು ಅಭಿಮಾನಿಗಳಿಗೆ ಚಿತ್ರ ಪ್ರದರ್ಶನ ಮಾಡುವ ಆಲೋಚನೆಯಿದೆ’ ಎಂದರು ನಿರ್ದೇಶಕರು.
ಜಯಶ್ರೀರಾಜ್ ರಾಮಾಚಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪತ್ನಿಯಾಗಿ ಪ್ರೇಮಾ ಗೌಡ, ಚಾಮಯ್ಯನಾಗಿ ಪ್ರದೀಪ್ ಶಾಸ್ತ್ರೀ, ಮಗಳಾಗಿ ಚೈತ್ರಾ ನಟಿಸಿದ್ದಾರೆ.
ಸ್ಯಾಂ ಸಂಗೀತ ಸಂಯೋಜನೆ, ಎಂ.ಆರ್.ಸೀನು ಛಾಯಾಚಿತ್ರಗ್ರಹಣ, ಶಿವಕುಮಾರ್.ಎ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.