ADVERTISEMENT

ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್‌’ ಜನವರಿ 30ಕ್ಕೆ ತೆರೆಗೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 23:30 IST
Last Updated 2 ಜನವರಿ 2026, 23:30 IST
   

‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್‌’ ಸಿನಿಮಾ ಜ.30ರಂದು ತೆರೆಕಾಣಲಿದೆ. ನಟ ಧ್ರುವ ಸರ್ಜಾ ಬಿಡುಗಡೆ ದಿನಾಂಕವನ್ನು ಅನಾವರಣಗೊಳಿಸಿದರು. 

ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ಧನ್ಯಾ ರಾಮ್‌ಕುಮಾರ್‌, ಚೈತ್ರಾ ನಾಯಕಿಯರಾಗಿದ್ದಾರೆ. ಅಪ್ಪ–ಮಗನ ಬಾಂಧವ್ಯದ ಕುರಿತ ಕಥೆ ಚಿತ್ರದಲ್ಲಿದ್ದು, ನಾಯಕನ ತಂದೆಯಾಗಿ ಸಾಯಿಕುಮಾರ್ ಬಣ್ಣಹಚ್ಚಿದ್ದಾರೆ. ಫ್ಯಾಮಿಲಿ ಡ್ರಾಮಾ ಜಾನರ್‌ನ ಚಿತ್ರದಲ್ಲಿ, ಶ್ವೇತಾ, ಸುಧಾರಾಣಿ, ಧರ್ಮ, ‘ಬಿಗ್‌ಬಾಸ್’ ಖ್ಯಾತಿಯ ಗಿಲ್ಲಿ ನಟ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ವಿ.ಎಸ್.ಎಂಟರ್‌ಟೇನ್ಮೆಂಟ್‌ ಬ್ಯಾನರ್‌ನಡಿ ಕಲ್ಲಹಳ್ಳಿ ಚಂದ್ರಶೇಖರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಸಿದ್ದು ಕಂಚನಹಳ್ಳಿ ಛಾಯಾಚಿತ್ರಗ್ರಹಣ,‌ ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.