ಸಿಂಪ್ಲಿಫನ್ ಮೀಡಿಯಾ ನೆಟ್‌ವರ್ಕ್ ಬ್ಯಾನರ್‌ನಲ್ಲಿ ನಿರ್ಮಾಣಗೊಂಡ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ ‘ಚೇಸ್’ ಜುಲೈ 15ರಂದು ತೆರೆಗೆ ಬರಲಿದೆ.
‘ಪ್ರತ್ಯೇಕ ಪ್ರದೇಶಗಳಲ್ಲಿ ಇದ್ದ ಇಬ್ಬರು ಅನಿರೀಕ್ಷಿತವಾಗಿ ನಡೆಯುವ ಘಟನೆಗಳಿಂದ ಪರಸ್ಪರ ಭೇಟಿಯಾದಾಗ ಏನಾಗುತ್ತದೆ, ಆ ಘಟನೆಗಳೇನು? ಆ ಪಾತ್ರಗಳು ಪ್ರಕರಣವೊಂದನ್ನುಚೇಸ್ಮಾಡುತ್ತ ಹೋಗುವುದು ಮತ್ತು ಅದಕ್ಕೆ ಸಂಬಂಧಿಸಿ ನಡೆಯುವ ಘಟನೆಗಳು, ಹೊರಬರುವ ರಹಸ್ಯಗಳ ಹೂರಣವೇ ‘ಚೇಸ್’ ಎಂದಿದ್ದಾರೆ ನಿರ್ದೇಶಕವಿಲೋಕ್ ಶೆಟ್ಟಿ.
ಚಿತ್ರದಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಅರವಿಂದ ಬೋಳಾರ್, ರೆಹಮಾನ್ ಹಾಸನ್, ರಾಜೇಶ್ ನಟರಂಗ, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ,ಅರ್ಜುನ್ ಯೋಗಿ, ಅರವಿಂದ ರಾವ್, ಶ್ವೇತಾ ಸಂಜೀವುಲು ನಟಿಸಿದ್ದಾರೆ.
ಮನೋಹರ ಸುವರ್ಣ, ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ಚಿತ್ರದ ನಿರ್ಮಾಪಕರು. ಅನಂತ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಸಂಗೀತ, ಡಾ.ಉಮೇಶ್ ಪಿಲಿಕುಡೇಲು ಸಾಹಿತ್ಯ ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು, ಉಡುಪಿ, ಹಿಮಾಚಲ ಪ್ರದೇಶ, ಕೊಚ್ಚಿನ್‌ನಲ್ಲಿ ಸುಮಾರು 52 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಲಭಿಸಿದೆ ಎಂದರು ವಿಲೋಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.