ADVERTISEMENT

ಬಂತು ಹೊಸ ಒಟಿಟಿ ಸಿನಿಬಜಾರ್‌: ಏನೇನು ವಿಶೇಷ?

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 13:16 IST
Last Updated 19 ಫೆಬ್ರುವರಿ 2023, 13:16 IST
ಸಿನಿಬಜಾರ್‌ ತಂಡದೊಂದಿಗೆ ಬಾ.ಮ. ಹರೀಶ್‌ (ಎಡ) ಮತ್ತು ಉಮೇಶ್‌ ಬಣಕಾರ್‌ (ಬಲ)
ಸಿನಿಬಜಾರ್‌ ತಂಡದೊಂದಿಗೆ ಬಾ.ಮ. ಹರೀಶ್‌ (ಎಡ) ಮತ್ತು ಉಮೇಶ್‌ ಬಣಕಾರ್‌ (ಬಲ)   

ಸಿನಿಮಾ ಒಟಿಟಿ ವೇದಿಕೆಗಳು ಸಾಕಷ್ಟು ಇವೆ. ಆದರೆ, ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ ‘ಸಿನಿಬಜಾರ್‌’ ಒಟಿಟಿ.

ಸಾಮಾನ್ಯವಾಗಿ ಇತರ ಒಟಿಟಿಗಳಲ್ಲಿ ವಾರ್ಷಿಕ/ ಮಾಸಿಕ ಚಂದಾ ಪಾವತಿಸಿ ಚಿತ್ರ ಅಥವಾ ವಿಡಿಯೋ ಕಂಟೆಂಟ್‌ ನೋಡಬಹುದು. ಈ ವೇದಿಕೆಯಲ್ಲಿ ಹಾಗಲ್ಲ. ಒಮ್ಮೆ ನೋಂದಾಯಿಸಿದರೆ ಸಾಕು. ನೀವು ನೋಡಬೇಕಾದ ಚಿತ್ರಕ್ಕಷ್ಟೇ ನಿರ್ದಿಷ್ಟ ಮೊತ್ತ ಪಾವತಿಸಿ ನೋಡಬಹುದು. ಚಂದಾದಾರಿಕೆ ಅಥವಾ ಜಾಹೀರಾತು ಇಲ್ಲದ ಒಟಿಟಿ ಎಂದು ಹೇಳಿದೆ ಸಿನಿಬಜಾರ್‌ ತಂಡ.

ಈ ವೇದಿಕೆ ವಿಶ್ವದ 177 ದೇಶಗಳಲ್ಲಿ ಲಭಿಸಲಿದೆ. ಟಿವಿ. ಮೊಬೈಲ್‌, ವೆಬ್‌ಸೈಟ್‌ ಮೂಲಕವೂ ಸಿನಿಬಜಾರ್‌ ವಿಡಿಯೋ ಕಂಟೆಂಟ್‌ಗಳನ್ನು ನೋಡಬಹುದು.

ADVERTISEMENT

ಡಾ.ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ‘ಭಾಗ್ಯವಂತರು’ ಚಿತ್ರ ಈ ಒಟಿಟಿಯಲ್ಲಿ ಬಿಡುಗಡೆಯಾದ ಮೊದಲ ಚಿತ್ರ. ‘ಪಂಪ’, ‘ಕಾಕ್ಟೈಲ್’, ‘ಗುರ್ಬಿ’ ಚಿತ್ರಗಳೂ ಸರಣಿಯಲ್ಲಿ ಬಿಡುಗಡೆಯಾಗಿವೆ. ಭಾಸ್ಕರ ವೆಂಕಟೇಶ್‌ ಅವರು ಸಿನಿಬಜಾರ್‌ನ ಮುಖ್ಯಸ್ಥರು. ಇತ್ತೀಚೆಗೆ ನಡೆದ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ. ಹರೀಶ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.