ADVERTISEMENT

ತೆರೆ ಮೇಲೆ ಗಡಿನಾಡು ಅನಾವರಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 11:23 IST
Last Updated 26 ಜನವರಿ 2020, 11:23 IST
‘ಗಡಿನಾಡು’ ಚಿತ್ರದಲ್ಲಿ ಸಂಚಿತಾ ಪಡುಕೋಣೆ ಮತ್ತು ಪ್ರಭು ಸೂರ್ಯ
‘ಗಡಿನಾಡು’ ಚಿತ್ರದಲ್ಲಿ ಸಂಚಿತಾ ಪಡುಕೋಣೆ ಮತ್ತು ಪ್ರಭು ಸೂರ್ಯ   

‘ಗಡಿನಾಡು’ ನಾಗ್‌ ಹುಣಸೋಡ್‌ ನಿರ್ದೇಶನದ ಚಿತ್ರ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದ, ಅಲ್ಲಿನ ರಾಜಕೀಯ, ಗಡಿ ಭಾಗದ ಜನರ ಸಮಸ್ಯೆ ಸುತ್ತ ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಜೊತೆಗೆ, ಕನ್ನಡ ಹುಡುಗ ಮತ್ತು ಮರಾಠಿ ಹುಡುಗಿಯ ಪ್ರೇಮಕಥೆಯೂ ಇದರಲ್ಲಿ ಮಿಳಿತಗೊಂಡಿದೆಯಂತೆ.‌

ಇದೇ ಶುಕ್ರವಾರ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

ನಿರ್ದೇಶಕ ನಾಗ್ ಹುಣಸೋಡ್‌, ‘ಚಿತ್ರಕ್ಕೆ ಗಡಿನಾಡು ಎಂದು ಹೆಸರಿಟ್ಟಿರುವುದಕ್ಕೆ ಕೆಲವರು ಆಕ್ಷೇಪಿಸಿದ್ದಾರೆ. ಇದನ್ನು ಲೆಕ್ಕಿಸದೆ ಚಿತ್ರ ನಿರ್ಮಿಸಿ ಬಿಡುಗಡೆ ಮಾಡುತ್ತಿದ್ದೇವೆ. ಬೆಳಗಾವಿ ಗಡಿಭಾಗದಲ್ಲಿನ ವಾಸ್ತವಾಂಶದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇವೆ’ ಎಂದು ವಿವರಿಸಿದರು.

ADVERTISEMENT

‌ನಟಿ ಸಂಚಿತಾ ಪಡುಕೋಣೆ ಮರಾಠಿ ಹುಡುಗಿಯಾಗಿ ಬಣ್ಣ ಹಚ್ಚಿದ್ದಾರೆ. ‘ಇಂತಹ ಪಾತ್ರ ನನಗೆ ಹೊಸದು. ಎಲ್ಲಾ ವರ್ಗದ ಜನರು ನೋಡುವ ಚಿತ್ರ ಇದು’ ಎಂದರು.

‍ನಾಯಕ ಪ್ರಭುಸೂರ್ಯ ಅವರಿಗೆ ಇದು ಎರಡನೇ ಚಿತ್ರ. ‘ಬೆಳಗಾವಿ ಹುಡುಗನ ಪಾತ್ರ ನನ್ನದು. ಹೊಸಬರಿಗೆ ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕು’ ಎಂದು ಮನವಿ ಮಾಡಿದರು.

ವಸಂತ ಮುರಾರಿ ದಳವಾಯಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.