ADVERTISEMENT

Cockroach Sudhi: ಕಾಕ್ರೋಚ್ ಸುಧೀ ಈಗ ‘ಚೈಲ್ಡು’ 

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 0:39 IST
Last Updated 25 ಸೆಪ್ಟೆಂಬರ್ 2025, 0:39 IST
ಸುಧೀ
ಸುಧೀ   

ಕಾಕ್ರೋಚ್ ಸುಧೀ ನಾಯಕನಾಗಿ ನಟಿಸುತ್ತಿರುವ ‘ಚೈಲ್ಡು’ ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಅನಾವರಣಗೊಂಡಿದೆ. ಆ್ಯಕ್ಷನ್‌ ಕಥೆಯನ್ನು ಹೊಂದಿರುವ ಚಿತ್ರಕ್ಕೆ ಪ್ರಕಾಶ್ ಹೆಬ್ಬಾಳ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. 

‘ಹಫ್ತಾ’ ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಚಿತ್ರವಿದು. ಆ್ಯಕ್ಷನ್, ಕಾಮಿಡಿ, ಸೆಂಟಿಮೆಂಟ್, ಲವ್– ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳನ್ನೊಳಗೊಂಡಿದೆ. ಚಿತ್ರೀಕರಣ ಪ್ರಾರಂಭಗೊಂಡಿದೆ. ತಾರಾ ಅನುರಾಧಾ, ಅಶ್ವಿನ್ ಹಾಸನ್, ವಲ್ಲಭ್, ಉದಯ್ ಪ್ರಸನ್ನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿರುತ್ತಾರೆ. ರಂಗಾಯಣ ರಘು ಅವರ ಜೊತೆಗೂ ಮಾತುಕತೆ ನಡೆಯುತ್ತಿದೆ. ಸುಧೀ ಅವರು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇವೆ’ ಎಂದರು ನಿರ್ದೇಶಕ.

ಕಮಲ ಫಿಲ್ಮ್ಸ್‌ ಲಾಂಛನದಲ್ಲಿ ಚಂದ್ರಶೇಖರ್‌ ಕೆ. ಬಂಡವಾಳ ಹೂಡುತ್ತಿದ್ದಾರೆ. ‘ಇದು ನಾನು ನಾಯಕನಾಗಿ ನಟಿಸುತ್ತಿರುವ ಮೂರನೇ ಚಿತ್ರ. ನಿರ್ದೇಶಕ ಪ್ರಕಾಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಅದಕ್ಕಿಂತ ನೀವು ಈ ಚಿತ್ರದ ನಾಯಕ ಅಂತ ಹೇಳಿದ್ದು ಖುಷಿಯಾಯಿತು‌. ನನಗೆ ತಕ್ಕಂತಹ ಕಥೆಯನ್ನು ನಿರ್ದೇಶಕರು ಮಾಡಿದ್ದಾರೆ. ರೌಡಿಸಂ ಚಿತ್ರವಾದರೂ, ಲವ್ ಕೂಡ ಇರುತ್ತದೆ‌. ನನ್ನ ಲುಕ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದರು ಸುಧೀ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.