ADVERTISEMENT

ಬೇರೆಯವರ ನಂಬರ್‌ ಪ್ಲೇಟ್‌ ಬಳಸಿ ಬೈಕ್‌ ಸವಾರಿ: ನಟ ವಿಕ್ಕಿ ಕೌಶಲ್‌ ವಿರುದ್ಧ ದೂರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2022, 7:20 IST
Last Updated 2 ಜನವರಿ 2022, 7:20 IST
ವಿಕ್ಕಿ ಕೌಶಲ್‌
ವಿಕ್ಕಿ ಕೌಶಲ್‌   

ಇಂದೋರ್:ನಟ ವಿಕ್ಕಿ ಕೌಶಲ್ ಅವರು ಚಿತ್ರವೊಂದರ ಶೂಟಿಂಗ್‌ ವೇಳೆ ಬೈಕ್‌ನನಂಬರ್ ಪ್ಲೇಟ್ ಅನ್ನು ಕಾನೂನುಬಾಹಿರವಾಗಿಬಳಸಿದ್ದಾರೆ ಎಂದು ಇಲ್ಲಿನ ನಿವಾಸಿಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ದೂರನ್ನೂ ಸಹ ದಾಖಲಿಸಿದ್ದಾರೆ.

ವಿಕ್ಕಿ ಹಿಂದೆ ನಟಿಸಾರಾ ಅಲಿ ಖಾನ್ ಅವರು ಕುಳಿತು ಬೈಕ್‌ ಸವಾರಿ ಮಾಡುತ್ತಿರುವುದು ಈ ಚಿತ್ರದಲ್ಲಿಕಂಡುಬಂದಿದೆ.

ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವದೂರುದಾರ ಜೈ ಸಿಂಗ್ ಯಾದವ್, ‘ಸಿನಿಮಾ ಸಿಕ್ವೆನ್ಸ್‌ನಲ್ಲಿ ಬಳಸಲಾದ ವಾಹನದ ಸಂಖ್ಯೆ ನನಗೆ ಸಂಬಂಧಿಸಿದ್ದು.ಇದು ಚಲನಚಿತ್ರ ಘಟಕಕ್ಕೆ ತಿಳಿದಿದೆಯೇ ಎಂಬುದುನನಗೆ ಗೊತ್ತಿಲ್ಲ.ಆದರೆ, ಇದು ಕಾನೂನುಬಾಹಿರವಾಗಿದೆ. ಅವರು ನನ್ನ ಸಂಖ್ಯೆಯನ್ನು ಬಳಸಲು ಸಾಧ್ಯವಿಲ್ಲ. ಈ ಬಗ್ಗೆ ದೂರು ನೀಡಿದ್ದೇನೆ. ಪೊಲೀಸರುಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ದೂರಿನ ಕುರಿತು ಪ್ರತಿಕ್ರಿಯಿಸಿದ ಇಂದೋರ್‌ನ ಬಂಗಂಗಾ ಪ್ರದೇಶದ ಸಬ್‌ಇನ್‌ಸ್ಪೆಕ್ಟರ್ ರಾಜೇಂದ್ರ ಸೋನಿ, ‘ಈ ಸಂಬಂಧ ನಮಗೆ ದೂರು ಬಂದಿದೆ. ಅಕ್ರಮವಾಗಿ ನಂಬರ್ ಪ್ಲೇಟ್ ಬಳಸಲಾಗಿದೆಯೇ ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.