ADVERTISEMENT

ಮರಾಠಿಗರ ವಿರೋಧ: ಛಾವಾ ಸಿನಿಮಾದಲ್ಲಿನ ವಿವಾದಿತ ‘ಲೇಜಿಮ್’ ಹಾಡಿಗೆ ಕತ್ತರಿ

ಬಿಡುಗಡೆಗೆ ಸಿದ್ದವಾಗಿರುವ ಬಾಲಿವುಡ್‌ನ ಛಾವಾ ಸಿನಿಮಾದಲ್ಲಿನ ವಿವಾದಿತ ಲೇಜಿಮ್ ನೃತ್ಯದ ಹಾಡನ್ನು ತೆಗೆದುಹಾಕಲಾಗುವುದು ಎಂದು ನಿರ್ದೇಶಕ ಲಕ್ಷ್ಮಣ ಉಟೇಕರ್ ತಿಳಿಸಿದ್ದಾರೆ.

ಪಿಟಿಐ
Published 27 ಜನವರಿ 2025, 11:39 IST
Last Updated 27 ಜನವರಿ 2025, 11:39 IST
<div class="paragraphs"><p>ಮರಾಠಿಗರ ವಿರೋಧ: ಛಾವಾ ಸಿನಿಮಾದಲ್ಲಿನ ವಿವಾದಿತ ‘ಲೇಜಿಮ್’ ಹಾಡಿಗೆ ಕತ್ತರಿ</p></div>

ಮರಾಠಿಗರ ವಿರೋಧ: ಛಾವಾ ಸಿನಿಮಾದಲ್ಲಿನ ವಿವಾದಿತ ‘ಲೇಜಿಮ್’ ಹಾಡಿಗೆ ಕತ್ತರಿ

   

ಮುಂಬೈ: ಬಿಡುಗಡೆಗೆ ಸಿದ್ದವಾಗಿರುವ ಬಾಲಿವುಡ್‌ನ ಛಾವಾ ಸಿನಿಮಾದಲ್ಲಿನ ವಿವಾದಿತ ಲೇಜಿಮ್ ನೃತ್ಯದ ಹಾಡನ್ನು ತೆಗೆದುಹಾಕಲಾಗುವುದು ಎಂದು ನಿರ್ದೇಶಕ ಲಕ್ಷ್ಮಣ ಉಟೇಕರ್ ತಿಳಿಸಿದ್ದಾರೆ.

ಲೇಜಿಮ್ ನೃತ್ಯದಲ್ಲಿ ಸಂಭಾಜಿ ಹಾಗೂ ಯಶುಭಾಯಿಗೆ ಅವಮಾನ ಮಾಡಲಾಗಿದೆ, ಇತಿಹಾಸ ತಿರುಚಲಾಗಿದೆ ಎಂದು ಹಲವು ಮರಾಠಾ ರಾಜಕಾರಣಿಗಳು, ಮರಾಠಾ ಸಂಘಟನೆಗಳು ಟ್ರೇಲರ್ ಬಿಡುಗಡೆಯಾದ ಮರುದಿನ ಉಟೇಕರ್ ಮನೆ ಮುಂದೆ ಧರಣಿ ಮಾಡಿದ್ದವು.

ADVERTISEMENT

ಅಲ್ಲದೇ ಚಿತ್ರದಲ್ಲಿನ ವಿವಾದಿತ ಹಾಡನ್ನು ತೆಗೆದುಹಾಕದಿದ್ದರೆ ಸಿನಿಮಾ ಬಿಡುಗಡೆ ಮಾಡಲು ಬಿಡೆವು ಎಂದು ಎಚ್ಚರಿಕೆ ನೀಡಿದ್ದವು.

ಎಂಎನ್‌ಎಸ್‌ನ ರಾಜ್ ಠಾಕ್ರೆ ಜೊತೆಗಿನ ಸಭೆಯ ನಂತರ ಲಕ್ಷ್ಮಣ ಉಟೇಕರ್ ಈ ಘೋಷಣೆ ಮಾಡಿದರು. ಪರ ವಿರೋಧ ಏನೇ ಇರಬಹುದು. ಆದರೆ, ಪ್ರತಿಭಟನೆಗಳಿಗೆ ಗೌರವ ಕೊಟ್ಟು ಈ ನಿರ್ಧಾರ ಮಾಡಿದ್ದೇನೆ. ನಾಲ್ಕು ವರ್ಷ ಶ್ರಮ ಹಾಕಿ ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ.

ಮರಾಠಿ ಕಾದಂಬರಿಕಾರ ಶಿವಾಜಿ ಸಾವಂತ್ ಬರೆದಿರುವ ‘ಛಾವಾ’ ಕೃತಿಯನ್ನು ಆಧರಿಸಿ ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಕುರಿತ ಚಿತ್ರ ಇದಾಗಿದೆ.

ಸಂಭಾಜಿ ಪಾತ್ರದಲ್ಲಿ ವಿಕ್ಕಿ ಕೌಶಲ್ ಅವರು ಅಭಿನಯಿಸಿದ್ದು, ಸಂಭಾಜಿ ಪತ್ನಿ ‘ಯಶುಬಾಯಿ’ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಇದ್ದಾರೆ. ಬಾಲಿವುಡ್ ನಟ ಅಕ್ಷಯ್ ಖನ್ನಾ ‍ಪ್ರಮುಖ ಪಾತ್ರದಲ್ಲಿದ್ದಾರೆ.

ಮಡ್ಡೊಕ್ ಫಿಲ್ಮ್ಸ್‌ನ ದಿನೇಶ್ ವಿಜನ್ ನಿರ್ಮಾಣ ಮಾಡಿದ್ದಾರೆ. ಎ.ಆರ್. ರೆಹಮಾನ್ ಅವರು ಸಂಗೀತ ನೀಡಿದ್ದಾರೆ.

ಲುಕಾ ಚುಪ್ಪಿ, ಮಿಮಿ ಅಂತಹ ಕಲಾತ್ಮಕ ಸಿನಿಮಾಗಳನ್ನು ನಿರ್ದೇಶಿಸಿದ್ದ ಲಕ್ಷ್ಮಣ ಉಟೇಕರ್ ಅವರು ಇದೀಗ ಐತಿಹಾಸಿಕ ಕಥೆ ಹೊಂದಿರುವ ಬಿಗ್ ಬಜೆಟ್ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಫೆಬ್ರುವರಿ 14 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲು ತಯಾರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.