ADVERTISEMENT

ಮೇಘನಾ ಮಗುವಿಗೆ ನ. 12ರಂದು ತೊಟ್ಟಿಲ ಶಾಸ್ತ್ರ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 9:28 IST
Last Updated 11 ನವೆಂಬರ್ 2020, 9:28 IST
ಅಣ್ಣನ ಮಗುವಿಗಾಗಿ ಧ್ರುವ ಕುಟುಂಬದವರು ಬೆಳ್ಳಿ ತೊಟ್ಟಿಲು ಖರೀದಿಸಿರುವುದು
ಅಣ್ಣನ ಮಗುವಿಗಾಗಿ ಧ್ರುವ ಕುಟುಂಬದವರು ಬೆಳ್ಳಿ ತೊಟ್ಟಿಲು ಖರೀದಿಸಿರುವುದು   

ಚಿರಂಜೀವಿಸರ್ಜಾ-ಮೇಘನಾರಾಜ್‌ ಮಗುವಿನ ನಾಮಕರಣ ನವೆಂಬರ್‌ 12ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ. ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಮೇಘನಾ ತವರುಮನೆ (ಸುಂದರರಾಜ್‌ ಪ್ರಮೀಳಾ ಜೋಷಾಯ್‌ ಮನೆ)ಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮೇಘನಾ ಅವರ ತಂದೆ, ನಟ ಸುಂದರರಾಜ್‌ ತಿಳಿಸಿದ್ದಾರೆ.

ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನದ ಬಳಿಕ ಅವರ ಕುಟುಂಬದಲ್ಲಿ ಮೊಮ್ಮಗ ಬಂದಿರುವುದು ಸಹಜವಾಗಿ ಸುಂದರರಾಜ್‌ ದಂಪತಿಗೆ ಸಂತಸ ತಂದಿದೆ.

ಮಗು ಜನಿಸಿದ ಬಳಿಕ ಚಿರಂಜೀವಿ ಸಹೋದರ ದ್ರುವ ಸರ್ಜಾ ಮಗುವಿಗಾಗಿ ಬೆಳ್ಳಿಯ ತೊಟ್ಟಿಲು ಖರೀದಿಸಿದ್ದರು. ಇನ್ನೊಂದು ತೊಟ್ಟಿಲು ಕಲಘಟಗಿಯಿಂದ ತರಿಸಿದ್ದೂ ಸುದ್ದಿಯಾಗಿತ್ತು.

ADVERTISEMENT

ಈಗಾಗಲೇ ಸುಂದರರಾಜ್‌ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಅಲಂಕಾರ, ಸಿದ್ಧತೆ ಸಾಗಿದೆ. ಈ ಸಂದರ್ಭ ಮೇಘನಾ ಅವರು ತಮ್ಮ ಮುಂದಿನ ನಿರ್ಧಾರಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಸುಂದರರಾಜ್‌ ಸುಳಿವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.