ADVERTISEMENT

ರಮೇಶ್‌ ಅರವಿಂದ್‌ 106ನೇ ಚಿತ್ರ ‘ದೈಜಿ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 0:30 IST
Last Updated 14 ಜನವರಿ 2025, 0:30 IST
ರಾಧಿಕಾ, ರಮೇಶ್‌ ಅರವಿಂದ್‌, ಆಕಾಶ್‌ ಶ್ರೀವತ್ಸ, ರವಿ ಕಶ್ಯಪ್
ರಾಧಿಕಾ, ರಮೇಶ್‌ ಅರವಿಂದ್‌, ಆಕಾಶ್‌ ಶ್ರೀವತ್ಸ, ರವಿ ಕಶ್ಯಪ್   

ರಮೇಶ್‌ ಅರವಿಂದ್‌ ನಟನೆಯ 106ನೇ ಚಿತ್ರ, ಆಕಾಶ್‌ ಶ್ರೀವತ್ಸ ನಿರ್ದೇಶನದ ‘ದೈಜಿ’ ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆಯಿತು. 

‘ದೈಜಿ’ ಥ್ರಿಲ್ಲರ್ ಹಾರರ್ ಚಿತ್ರವಾಗಿದ್ದು ರಮೇಶ್ ಅರವಿಂದ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಹಿಂದೆ ರಮೇಶ್‌ ಅವರು ನಟಿಸಿದ್ದ ‘ಶಿವಾಜಿ ಸುರತ್ಕಲ್‌’ ಸಿನಿಮಾ ಸರಣಿಯನ್ನು ಆಕಾಶ್‌ ನಿರ್ದೇಶಿಸಿದ್ದರು. ಇದು ರಮೇಶ್‌ ಅವರ ಸಿನಿಪಯಣಕ್ಕೆ ಹೊಸ ತಿರುವು ನೀಡಿತ್ತು. ಇವರ ಕಾಂಬಿನೇಷನ್‌ನ ಮೂರನೇ ಸಿನಿಮಾ ಇದಾಗಿದೆ. ರವಿ ಕಶ್ಯಪ್ ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ‘ದೈಜಿ’ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲ್ಲಿ ‘ದೈಜಿ’ ಎಂದರೆ ರಕ್ತ ಸಂಬಂಧ. ಜಪಾನೀ ಭಾಷೆಯಲ್ಲಿ ‘ದೈಜಿ’ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂದು ಚಿತ್ರತಂಡ ತಿಳಿಸಿದೆ. ಹಿಂದೆಂದೂ ಕಾಣಿಸಿಕೊಳ್ಳದಂತಹ ಪಾತ್ರದಲ್ಲಿ ರಮೇಶ್‌ ಅವರು ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಾಯಕಿಯಾಗಿ ರಾಧಿಕಾ ನಾರಾಯಣ್ ನಟಿಸಲಿದ್ದು, ಶ್ರೀಶ ಕುದುವಳ್ಳಿ ಛಾಯಾಚಿತ್ರಗ್ರಹಣ ಚಿತ್ರಕ್ಕಿರಲಿದೆ. ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ವಿದೇಶದಲ್ಲಿ ಪ್ರಾರಂಭವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT