ADVERTISEMENT

Daali Dhananjay Marriage |ಮನೆಶಾಸ್ತ್ರದಲ್ಲಿ ಭಾಗಿಯಾದ ನಟ ಡಾಲಿ ಧನಂಜಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 15:15 IST
Last Updated 13 ಫೆಬ್ರುವರಿ 2025, 15:15 IST
ಸಿದ್ದೇಶ್ವರಸ್ವಾಮಿ ಫೋಟೊ ಕೈಯಲ್ಲಿ ಹಿಡಿದುಕೊಂಡು ಡಾಲಿ ಧನಂಜಯ ಕೆಂಡ ಹಾಯ್ದರು.
ಸಿದ್ದೇಶ್ವರಸ್ವಾಮಿ ಫೋಟೊ ಕೈಯಲ್ಲಿ ಹಿಡಿದುಕೊಂಡು ಡಾಲಿ ಧನಂಜಯ ಕೆಂಡ ಹಾಯ್ದರು.   

ಹಾಸನ: ಮದುವೆ ನಿಶ್ಚಯವಾಗಿರುವ ನಟ ಡಾಲಿ ಧನಂಜಯ ಅವರು ಗುರುವಾರ ತಮ್ಮ ಹುಟ್ಟೂರಾದ ಅರಸೀಕೆರೆ ತಾಲ್ಲೂಕಿನ ಕಾಳೇನಹಳ್ಳಿಹಟ್ಟಿ ಗ್ರಾಮದಲ್ಲಿ ಸಾಂಪ್ರದಾಯಿಕ ಮನೆ ಶಾಸ್ತ್ರದಲ್ಲಿ ಭಾಗಿಯಾದರು.

ಜೇನುಕಲ್ಲು ಸಿದ್ದೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ, ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ, ಲಕ್ಷ್ಮೀ ವೆಂಕಟರಮಣಸ್ವಾಮಿಗೆ ಪೂಜೆ ಸಲ್ಲಿಸಿದರು. ಧನಂಜಯ ಹಾಗೂ ಅವರ ಕುಟುಂಬದವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮನೆದೇವರ ಮೂರ್ತಿಯ ಮೆರವಣಿಗೆ ನಡೆಸಿದರು. ಉತ್ಸವ ಮೂರ್ತಿಯನ್ನು ಮನೆಗೆ ತಂದು ಪೂಜೆ ಸಲ್ಲಿಸಿದರು.

ನಂತರ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಫೋಟೊ ಕೈಯಲ್ಲಿ ಹಿಡಿದುಕೊಂಡು ಧನಂಜಯ ಕೆಂಡ ಹಾಯ್ದರು. ಮದುವೆಗೆ ಮೊದಲು ಸಿದ್ದೇಶ್ವರಸ್ವಾಮಿಗೆ ತೀರಿಸಬೇಕಾದ ಹರಕೆಯನ್ನು ಭಕ್ತಿ-ಭಾವದಿಂದ ನೆರವೇರಿಸಿದರು. ಧನಂಜಯ ಹಾಗೂ ಡಾ.ಧನ್ಯತಾ ಅವರ ವಿವಾಹವು ಫೆ.15 ಮತ್ತು 16 ರಂದು ಮೈಸೂರಿನಲ್ಲಿ ನಡೆಯಲಿದೆ.

ADVERTISEMENT
ಸಿದ್ಧೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.
ಅರಸೀಕೆರೆ ತಾಲ್ಲೂಕಿನ ಕಾಳೇನಹಳ್ಳಿಹಟ್ಟಿಯಲ್ಲಿ ಗುರುವಾರ ನಟ ಡಾಲಿ ಧನಂಜಯ ಅವರು ಸಿದ್ಧೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿದರು.
ಸಿದ್ಧೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.