ADVERTISEMENT

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಡಾಲಿ ಧನಂಜಯ್: ಧನ್ಯತಾಗೆ ಸ್ಪೆಷಲ್ ವಿಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2026, 5:58 IST
Last Updated 16 ಫೆಬ್ರುವರಿ 2026, 5:58 IST
<div class="paragraphs"><p>ಡಾಲಿ ಧನಂಜಯ್, ಧನ್ಯತಾ</p></div>

ಡಾಲಿ ಧನಂಜಯ್, ಧನ್ಯತಾ

   

ಚಂದನವನದ ನಟ ಡಾಲಿ ಧನಂಜಯ್‌ ಮತ್ತು ಪತ್ನಿ ಧನ್ಯತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ (ಫೆ.16) ಒಂದು ವರ್ಷಗಳು ಕಳೆದಿವೆ. ಇದೇ ಸಂಭ್ರಮದಲ್ಲಿ ಡಾಲಿ ಧನಂಜಯ್ ಅವರು ಪತ್ನಿ ಧನ್ಯತಾಗೆ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಧನ್ಯತಾ ಅವರ ಜೊತೆಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಒಂದು ವರ್ಷ ಆಗಿದ್ದು ಗೊತ್ತಾಗಲೇ ಇಲ್ಲ, ನಮ್ಮನ್ನು ಒಟ್ಟಿಗೆ ಸೇರಿಸಿದ್ದ ಆ ಪ್ರಕೃತಿ ಮಾತೆಗೆ ಧನ್ಯವಾದಗಳು. ಪ್ರೇಮಿಗಳ ದಿನದ ಶುಭಾಶಯಗಳು, ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಮತ್ತು ಒಂದು ದಿನ ಮುಂಚಿತವಾಗಿ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಇತ್ತೀಚೆಗೆ ‘ಉದಯ ಕನ್ನಡಿಗ 2025’ ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್‌ ಅವರು ತಂದೆ ಆಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. 2025ರ ಫೆಬ್ರುವರಿ 16ರಂದು ನಟ ಡಾಲಿ ಧನಂಜಯ್ ಅವರು ವೈದ್ಯೆ ಡಾ. ಧನ್ಯತಾ ಅವರೊಂದಿಗೆ ಮೈಸೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದಿದ್ದ ಈ ವಿವಾಹ ಮಹೋತ್ಸವದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು. ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.