ADVERTISEMENT

ತಂದೆಯ ಹುಟ್ಟುಹಬ್ಬದಂದು ಅಭಿಮಾನಿಗಳ ಮನಸ್ಸು ಗೆದ್ದ ದರ್ಶನ್ ಮಗ ವಿನೀಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2026, 5:30 IST
Last Updated 18 ಫೆಬ್ರುವರಿ 2026, 5:30 IST
<div class="paragraphs"><p>ನಟ ದರ್ಶನ್, ಮಗ ವಿನೀಶ್, ವಿಜಯಲಕ್ಷ್ಮಿ ದರ್ಶನ್</p></div>

ನಟ ದರ್ಶನ್, ಮಗ ವಿನೀಶ್, ವಿಜಯಲಕ್ಷ್ಮಿ ದರ್ಶನ್

   

ಚಿತ್ರ: ಇನ್‌ಸ್ಟಾಗ್ರಾಂ

ಫೆಬ್ರುವರಿ.16ರಂದು ಕನ್ನಡ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಹುಟ್ಟುಹಬ್ಬವಾಗಿತ್ತು. ಆ ದಿನ ದರ್ಶನ್ ಅವರ ಅಭಿಮಾನಿಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆಯಾ ಊರಿನಲ್ಲಿರುವ ಅನಾಥಾಶ್ರಮಗಳಿಗೆ ಊಟ ವಿತರಣೆ, ವಿದ್ಯಾರ್ಥಿಗಳಿಗೆ ಬಟ್ಟೆ–ಪುಸ್ತಕ, ರಕ್ತದಾನ ಶಿಬಿರ ಹೀಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ನಡೆಸಿದ್ದರು.

ADVERTISEMENT

ಆ ಬೆನ್ನಲ್ಲೆ ನಟ ದರ್ಶನ್ ಅವರ ಪುತ್ರ ವಿನೀಶ್ ತಂದೆಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಈ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ದರ್ಶನ್ ಮಗ ವಿನೀಶ್ ಅಪ್ಪನ 49ನೇ ಹುಟ್ಟುಹಬ್ಬದ ಪ್ರಯುಕ್ತ ಬುದ್ಧಿಮಾಂದ್ಯ ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಉಡುಗೊರೆ ನೀಡಿದ್ದಾರೆ.

ಮನೋವಿಕಾಸ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿರುವ ಬುದ್ಧಿಮಾಂದ್ಯ ಮಕ್ಕಳಿಗೆ ಬಟ್ಟೆ ಹಾಗೂ ಆಟದ ವಸ್ತುಗಳನ್ನು ವಿತರಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೊ ನೋಡಿದ ದರ್ಶನ್ ಅಭಿಮಾನಿಗಳು, ‘ವಿನೀಶ್ ತಂದೆಗೆ ತಕ್ಕ ಮಗ’, ‘ಒಳ್ಳೆಯ ಕೆಲಸ ಮಾಡುತ್ತಿರುವೆ ವಿನೀಶ್’, ‘ನಿಮ್ಮ ಮೇಲೆ ಹೆಮ್ಮೆ ಜಾಸ್ತಿಯಾಗಿದೆ’ ಎಂದು ಕಮೆಂಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.