ADVERTISEMENT

ಯೋಗಕ್ಕೆ ಋಣಿ: ಮಾನುಷಿ ಮನದ ಮಾತು

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 8:04 IST
Last Updated 22 ಜೂನ್ 2020, 8:04 IST
ಮಾನುಷಿ ಚಿಲ್ಲರ್
ಮಾನುಷಿ ಚಿಲ್ಲರ್   

ಯೋಗಾಭ್ಯಾಸ ಬದುಕಿಗೆ ಎಷ್ಟೊಂದು ಪ್ರಯೋಜನ, ಯೋಗದಿಂದ ತಾನೇನು ಪಡೆದುಕೊಂಡಿರುವೆ ಮತ್ತು ಯೋಗ ಮಾಡುವುದು ಕೂಡ ಬದುಕಿನ ಒಂದು ಯೋಗಾಯೋಗಾ ಎನ್ನುವ ಮಾತು ಹೇಳಿದ್ದಾರೆ2017ರ ಸಾಲಿನ ‘ಜಗದೇಕ ಸುಂದರಿ’ ಮಾನುಷಿ ಚಿಲ್ಲರ್‌.

ಬಳುಕುವ ಬಳ್ಳಿಯಂತಹ ದೇಹಕಾಯದ ‌ಈ ಚೆಲುವೆ, ‘ಯೋಗವು ನನ್ನನ್ನು ಮಾನಸಿಕ ಮತ್ತು ದೈಹಿಕವಾಗಿ ಬಲಶಾಲಿಯಾಗಿಸಿದೆ. ಯೋಗಕ್ಕೆ ನಾನು ಯಾವಾಗಲೂ ಋಣಿಯಾಗಿರುವೆ.ಶಾಲಾ ಹಂತದಲ್ಲಿಂದಲೂಯೋಗವು ನನ್ನ ಬದುಕಿನ ಒಂದು ಭಾಗವೇ ಆಗಿದೆ. ಯೋಗ ದೇಹಕ್ಕೆ ಏನೇನು ಕೊಟ್ಟಿದೆ ಎನ್ನುವುದಕ್ಕಿಂದ ನನ್ನಲ್ಲಿ ಹೆಚ್ಚು ಅರಿವು ಮತ್ತು ಪ್ರಜ್ಞೆಯನ್ನು ಬೆಳೆಸಿದೆ ಎನ್ನಬಲ್ಲೆನು. ಯೋಗವು ನನ್ನನ್ನು ಬಲಶಾಲಿಯಾಗಿಸುವ ಜತೆಗೆ ಆನಂದ ಅನುಭವಿಸುವಂತೆ ಮತ್ತು ಸದಾ ಹಸನ್ಮುಖಿಯಾಗಿರುವಂತೆಯೂ ಮಾಡಿದೆ’ ಎನ್ನುವ ಮಾತು ಹೇಳಿದ್ದಾರೆ.

ಯೋಗ ನನಗೆ ತಾಳ್ಮೆ ಕಲಿಸಿದೆ. ಅದಕ್ಕಿಂತಲೂ ಮುಖ್ಯವಾಗಿ ಬೇಡದ ವಿಚಾರಗಳನ್ನು ಮನಸಿನಿಂದ ಸರಾಗವಾಗಿ ಹೊರಹಾಕುವ ಗುಣವನ್ನು ಬೆಳೆಸಿದೆ. ನನ್ನಲ್ಲಿ ಏಕಾಗ್ರತೆಯನ್ನು ಚುರುಕುಗೊಳಿಸಿದೆ. ಜತೆಗೆ ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ನನ್ನದು ಮಾನಸಿಕವಾಗಿ ಸಧೃಡಗೊಳಿಸಿದೆ. ಜೀವನದ ಬಗೆಗಿನ ನನ್ನ ದೃಷ್ಟಿಕೋನಕ್ಕೆ ಯೋಗ ಸಾಕಷ್ಟು ಸಹಾಯ ಮಾಡಿದೆ ಎನ್ನುವ ಮಾತನ್ನು ಚೆಲುವೆ ಚಿಲ್ಲರ್‌ ಸೇರಿಸಿದ್ದಾರೆ.

ADVERTISEMENT

ಹಲವು ಉತ್ಪನ್ನಗಳಿಗೆ ಪ್ರಚಾರರಾಯಭಾರಿಯಾಗಿರುವ ಮಾನುಷಿ, ಇತ್ತೀಚೆಗಷ್ಟೇ ಅಡಿಡಾಸ್‌ ಉತ್ಪನ್ನಗಳ ಪ್ರಚಾರಕ್ಕೆ ರೂಪದರ್ಶಿಯಾಗಲು ಸಹಿ ಹಾಕಿದ್ದಾರೆ.

ಬಾಲಿವುಡ್‌ನ ಲಕ್ಕಿಮ್ಯಾನ್‌ ಎನ್ನಬಹುದಾದ ಅಕ್ಷಯ್‌ಕುಮಾರ್‌ ನಟನೆಯ ‘ಸಾಮ್ರಾಟ್‌ ಪೃಥ್ವಿರಾಜ್‌ ಚೌಹಾಣ್‌’ ಚಿತ್ರದಲ್ಲಿ ಮಾನುಷಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಮಾನುಷಿಗೆ ಡೆಬು ಸಿನಿಮಾ. ರಾಣಿ ಸಂಯೋಗಿತಾ (ಸಂಯುಕ್ತ) ಪಾತ್ರದಲ್ಲಿ ಅವರು ಚಿತ್ರರಸಿಕರನ್ನು ರಂಜಿಸುವ ನಿರೀಕ್ಷೆ ಬಿತ್ತಿದ್ದಾರೆ. ತೆರೆಯ ಮೇಲೆ ಚಿಲ್ಲರ್‌ ಸೌಂದರ್ಯ ಮತ್ತು ನಟನೆ ಕಣ್ತುಂಬಿಕೊಳ್ಳಲು ಸಿನಿಪ್ರಿಯರೂ ಕಾತರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.