ADVERTISEMENT

ಹೊಸ ಫ್ಯಾಶನ್ ಉಡುಗೆಯಲ್ಲಿ ಕಿಚ್ಚು ಹಚ್ಚಿದ ದೀಪಿಕಾ ಪಡುಕೋಣೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 6:33 IST
Last Updated 28 ಆಗಸ್ಟ್ 2021, 6:33 IST
ದೀಪಿಕಾ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್
ದೀಪಿಕಾ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್   

ಮುಂಬೈ: ಫ್ಯಾಶನ್ ವಿಷಯಕ್ಕೆ ಬಂದರೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಗೆ ಸಾಟಿ ಬಾಲಿವುಡ್‌ ಮತ್ತು ಹಾಲಿವುಡ್‌ನಲ್ಲಿ ಯಾರೂ ಇಲ್ಲವೆಂದರೂ ತಪ್ಪಾಗುವುದಿಲ್ಲ.

ಕ್ಯಾಶುಯಲ್‌ಗಳಿಂದ ಹಿಡಿದು ಎಂಥದ್ದೇ ಫ್ಯಾಶನ್ ಉಡುಪುಗಳಲ್ಲಿಯೂ ದೀಪಿಕಾ ಆಕರ್ಷಕ ಮತ್ತು ಬೋಲ್ಡ್ ಆಗಿ ಕಂಗೊಳಿಸುತ್ತಾರೆ. ಬಹುಶಃ ದೀಪಿಕಾಳಿಗೆ ಸರಿ ಹೊಂದದ ಯಾವುದೇ ಉಡುಪೂ ಇಲ್ಲ ಅನಿಸುತ್ತೆ.

ಇತ್ತೀಚೆಗೆ, ನಟಿ ಲ್ಯಾಟೆಕ್ಸ್ ಮತ್ತು ಲೆದರ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಶರತ್ಕಾಲಕ್ಕೆ ಪರಿವರ್ತನೆಯಾದ ನಟಿಯ ಆಕರ್ಷಕ ಉಡುಗೆಯ ಚಿತ್ರ ಇನ್‌ಸ್ಟಾಗ್ರಾಮಲ್ಲಿ ಬಿಸಿ ಏರಿಸುತ್ತಿದೆ.

84 ಸಾವಿರದ ಸ್ಟ್ರ್ಯಾಪ್, ಕಪ್ಪು ಬಣ್ಣದ ಲೆದರ್ ಜಾಕೆಟ್ ಮತ್ತು ಪ್ಯಾಂಟ್ ಧರಿಸಿ, ಕಣ್ಣಿಗೆ ಕಾಡಿಗೆ ಹಚ್ಚಿರುವ ಬಾಲಿವುಡ್ ಪದ್ಮಾವತಿ, ತಮ್ಮ ಸೌಂರ್ಯದ ಮೂಲಕ ಪಡ್ಡೆಗಳಿಗೆ ಕಿಚ್ಚು ಹಚ್ಚುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.