ಮುಂಬೈ: ಬಾಲಿವುಡ್ ಜನಪ್ರಿಯ ದಂಪತಿ ದೀಪಿಕಾ ಪಡುಕೋಣೆ – ರಣವೀರ್ ಸಿಂಗ್ ಇದೇ ಮೊದಲ ಬಾರಿಗೆ ಮಗಳು ‘ದುವಾ’ ಮುಖವನ್ನು ಹೊರ ಜಗತ್ತಿಗೆ ತೋರಿಸಿದ್ದಾರೆ.
2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ 2024ರಲ್ಲಿ ಪೋಷಕರಾಗಿ ಬಡ್ತಿ ಪಡೆದಿದ್ದರು. ಸೆಪ್ಟೆಂಬರ್ 8ರಂದು ಜನಿಸಿದ್ದ ದುವಾ, ಇತ್ತೀಚೆಗಷ್ಟೆ ಒಂದು ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ದುವಾ ಹುಟ್ಟುಹಬ್ಬವನ್ನು ಮಾಧ್ಯಮ ಮಿತ್ರರೊಂದಿಗೆ ಆಚರಿಸಿಕೊಂಡಿದ್ದ ದೀಪಿಕಾ, ಖಾಸಗಿತನ ಗೌರವಿಸುವಂತೆ ಮನವಿ ಮಾಡಿದ್ದರು.
ದೀಪಾವಳಿ ಸಂದರ್ಭ ತಮ್ಮ ನೆಚ್ಚಿನ ನಟಿಯ ಮಗಳ ಮುಖ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.