ADVERTISEMENT

‘ದೇಹಿ’ ಹಾಡು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 19:30 IST
Last Updated 16 ಜನವರಿ 2020, 19:30 IST
'ದೇಹಿ' ಚಿತ್ರದಲ್ಲಿ ಕಿಶೋರ್
'ದೇಹಿ' ಚಿತ್ರದಲ್ಲಿ ಕಿಶೋರ್    

ಕೇರಳದ ಸಮರಕಲೆ ‘ಕಳರಿಪಯಟ್ಟು’ವನ್ನು ಕೇಂದ್ರಬಿಂದುವಾಗಿಸಿಕೊಂಡ ಸಿನಿಮಾ ‘ದೇಹಿ’. ನಟ ಕಿಶೋರ್ ಅವರ ವಿಭಿನ್ನ ಗೆಟಪ್‌ನಿಂದಾಗಿ ಇದು ಸಿನಿಮಾ ಪ್ರೇಮಿಗಳ ಕುತೂಹಲಕ್ಕೂ ಕಾರಣವಾಗಿದೆ.

ಈ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ‘ಇದು ಕಳರಿಪಯಟ್ಟು ಆಧಾರಿತ ಸಿನಿಮಾ. ಒಬ್ಬಳು ಹೆಣ್ಣುಮಗಳಿಗೆ ಇತರ ಹೆಣ್ಣುಮಕ್ಕಳಿಗೆ ಇರುವಂತೆಯೇ ಕನಸುಗಳು ಇರುತ್ತವೆ. ಆದರೆ ಜೀವನ ಅವಳಿಗೆ ಒಂದಿಷ್ಟು ಸವಾಲುಗಳನ್ನು ತಂದೊಡ್ಡುತ್ತದೆ. ಇದು ಆಕೆಯ ಮೇಲೆ ಯಾವ ಪರಿಣಾಮ ಬೀರುತ್ತದೆ, ಅವಳು ಕಳರಿ ಕಲೆಯ ಸಹಾಯದಿಂದ ಆ ಸವಾಲುಗಳನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದು ಚಿತ್ರದ ಕಥೆ’ ಎಂದರು ಮುಖ್ಯ ಪಾತ್ರ ನಿಭಾಯಿಸಿರುವ ಉಪಾಸನಾ.

ಈ ಚಿತ್ರವು ಕಳರಿಪಯಟ್ಟು ಬಗ್ಗೆ ಹಲವು ಮಾಹಿತಿ ನೀಡಲಿದೆಯಂತೆ. ಚಿತ್ರವನ್ನು ಹಂಪಿ, ಬೇಲೂರು, ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಇದು ಮಹಿಳಾ ಸಬಲೀಕರಣದ ಆಶಯವನ್ನೂ ಹೊಂದಿದೆ ಎಂದು ಚಿತ್ರತಂಡ ಹೇಳಿದೆ.

ADVERTISEMENT

ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ನಟ ವಿಜಯ ರಾಘವೇಂದ್ರ, ‘ನಾನೂ ಕಳರಿಪಯಟ್ಟು ಕಲಿತಿದ್ದೇನೆ. ಈ ಕಳೆ ಮಾನಸಿಕ ದೃಢತೆಯನ್ನು ನೀಡುತ್ತದೆ. ನಮ್ಮ ಎಲ್ಲ ಹೆಣ್ಣು ಮಕ್ಕಳಿಗೂ ಈ ಕಲೆಯ ಪರಿಚಯ ಆಗಬೇಕು’ ಎಂದರು. ಧನ ಶೇಖರ್ ಅವರು ಈ ಚಿತ್ರ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.