ADVERTISEMENT

₹200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ: ನಟಿ ಜಾಕ್ವೆಲಿನ್‌ಗೆ ಜಾಮೀನು ಮಂಜೂರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2022, 12:53 IST
Last Updated 15 ನವೆಂಬರ್ 2022, 12:53 IST
ಜಾಕ್ವೆಲಿನ್‌ ಫರ್ನಾಂಡಿಸ್‌
ಜಾಕ್ವೆಲಿನ್‌ ಫರ್ನಾಂಡಿಸ್‌   

ನವದೆಹಲಿ: ವಂಚಕ ಸುಕೇಶ್‌ ಚಂದ್ರಶೇಖರ್ ಆರೋಪಿಯಾಗಿರುವ ₹ 200 ಕೋಟಿ ಹಣ ಅಕ್ರಮವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರಿಗೆ ದೆಹಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶೈಲೇಂದ್ರ ಮಲಿಕ್‌ ಮಂಗಳವಾರ ಜಾಮೀನು ಮಂಜೂರು ಮಾಡಿದರು.

ಆಗಸ್ಟ್ 31ರಂದು ಜಾರಿ ನಿರ್ದೇಶನಾಲಯ ಸಲ್ಲಿಸಿದ ಆರೋಪ ಪಟ್ಟಿಯನ್ನು ಪರಿಗಣಿಸಿದ ನ್ಯಾಯಾಧೀಶರು, ನ್ಯಾಯಾಲಯದ ಎದುರು ಹಾಜರಾಗುವಂತೆ ಜಾಕ್ವೆಲಿನ್‌ ಅವರಿಗೆ ಸೂಚನೆ ನೀಡಿದ್ದರು.

ನ.11ರಂದು (ಶುಕ್ರವಾರ) ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜಾಮೀನು ಅರ್ಜಿಯ ಆದೇಶವನ್ನು ನ.15ಕ್ಕೆ ಮುಂದೂಡಿತ್ತು.

ADVERTISEMENT

ನ್ಯಾಯಾಲಯವುಜಾಕ್ವೆಲಿನ್‌ ಫರ್ನಾಂಡಿಸ್ ಅವರ ಮಧ್ಯಂತರ ಜಾಮೀನು ಅವಧಿಯನ್ನು ಮಂಗಳವಾರದವರೆಗೆ ವಿಸ್ತರಿಸಿತ್ತು.

ಈ ಹಿಂದೆಜಾಕ್ವೆಲಿನ್‌ ಫರ್ನಾಂಡಿಸ್ ಅವರಿಗೆ ಮಧ್ಯಂತರ ಜಾಮೀನು ನೀಡಿದ್ದ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್, ಆದೇಶ ಸಿದ್ಧವಾಗಿಲ್ಲ ಎಂದು ಹೇಳಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿಯಿಂದ ಹಲವು ಬಾರಿ ಸಮನ್ಸ್ ಪಡೆದಿದ್ದ ಜಾಕ್ವೆಲಿನ್‌ ಅವರನ್ನು ಪೂರಕ ಚಾರ್ಜ್‌ಶೀಟ್‌ನಲ್ಲಿ ಇದೇ ಮೊದಲ ಬಾರಿಗೆ ಆರೋಪಿ ಎಂದು ಹೆಸರಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಇ.ಡಿ ತನ್ನ ಮೊದಲ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ನಂತರ, ಫೆಬ್ರುವರಿಯಲ್ಲಿ ಸುರೇಶ್‌ ಚಂದ್ರಶೇಖರ್ ಅವರನ್ನು ಜಾಕ್ವೆಲಿನ್‌ಗೆ ಪರಿಚಯಿಸಿದ್ದ ಪಿಂಕಿ ಇರಾನಿ ಎಂಬುವವರ ವಿರುದ್ಧವೂ ಪೂರಕ ಚಾರ್ಜ್‌ಶೀಟ್ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.