‘ಹೆಡ್‌ಬುಷ್’ ಸಿನಿಮಾದಲ್ಲಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ನಟ ಡಾಲಿ ಧನಂಜಯ ಮತ್ತೊಮ್ಮೆ ಅದೇ ಮಾದರಿಯ ಲುಕ್‌ನಲ್ಲಿ ಪ್ರೇಕ್ಷಕರೆದುರಿಗೆ ಬರಲಿದ್ದಾರೆ.
‘ಕವಲುದಾರಿ’, ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನಿರ್ದೇಶಕ ಹೇಮಂತ್ ಎಂ.ರಾವ್ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದಲ್ಲಿ ಧನಂಜಯ ಮತ್ತೆ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಲ್‌ಬಾಟಂ ಪ್ಯಾಂಟ್‌ನಲ್ಲಿ ರೆಟ್ರೋ ಶೈಲಿಯ ದಿರಿಸಿನಲ್ಲಿ ಧನಂಜಯ ಮಿಂಚಿದ್ದಾರೆ. ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿರಲಿದ್ದಾರೆ. ಸಿನಿಮಾವನ್ನು ವೈಶಾಖ್ ಜೆ ಗೌಡ ಅವರ ವೈಶಾಖ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಧನಂಜಯ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರವೊಂದರ ಮೂಲಕ ಧನಂಜಯ ಪ್ರೇಕ್ಷಕರೆದುರಿಗೆ ಬರಲಿದ್ದಾರೆ. ಎರಡು ಲುಕ್‌ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು ಎರಡರಲ್ಲೂ ಭಿನ್ನ ಶೈಲಿ ಹಾಗೂ ನೋಟವನ್ನು ಧನಂಜಯ ಬೀರಿದ್ದಾರೆ. ಟಾಮಿ ಗನ್ ಹಿಡಿದು ಧನಂಜಯ ನೀಡಿರುವ ಲುಕ್ ರಹಸ್ಯ ಏಜೆಂಟ್ ಮಾದರಿಯಲ್ಲಿದೆ. ಫಸ್ಟ್‌ಲುಕ್‌ನಲ್ಲಿ ಖ್ಯಾತ 999 ಸರಣಿಯ ರಾಜ್‌ಕುಮಾರ್ ಅವರ ಚಿತ್ರವು ಹಿನ್ನೆಲೆಯಲ್ಲಿದೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ 70ರ ದಶಕದ ಶೈಲಿ ಚಿತ್ರದ ವೈಶಿಷ್ಟ್ಯವಾಗಿದ್ದು ಶಿವರಾಜ್‌ಕುಮಾರ್ ಅವರೂ ಭಿನ್ನವಾದ ಒಂದು ಪಾತ್ರದ ಮುಖಾಂತರ ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ.
‘ನಿರ್ದೇಶಕನ ಉತ್ಸಾಹ ಮತ್ತು ಸೂಕ್ಷ್ಮವಾದ ದೃಷ್ಟಿಕೋನವನ್ನು ಓರ್ವ ನಟ ಕಂಡುಕೊಂಡಾಗ, ಆ ನಟ ಒಂದು ಮಗುವಿನಂತೆ ನಟನೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಾನೆ. ಹೇಮಂತ್ ಹಾಗೂ ವೈಶಾಖ್ ಸಿನಿಮಾವನ್ನು ಉಸಿರಾಡುವ ಉತ್ಸಾಹಿಗಳು. ಚರಣ್ ರಾಜ್ ಮತ್ತು ಅದ್ವೈತ ಗುರುಮೂರ್ತಿ ಇರುವ ಒಂದು ತಂಡದೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಸಂತೋಷವಿದೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಪ್ರೇಕ್ಷಕರನ್ನು ಆರಂಭದಿಂದಲೇ ಹಿಡಿದಿಟ್ಟುಕೊಳ್ಳುವ ಚಿತ್ರ. ಈ ಚಿತ್ರವು ವಿಭಿನ್ನ ಜಗತ್ತಿನಲ್ಲಿ ನಡೆಯುತ್ತದೆ ಮತ್ತು ನಾವು ಹಲವಾರು ಅಚ್ಚರಿಗಳನ್ನು ಜೋಡಿಸಿದ್ದೇವೆ’ ಎನ್ನುತ್ತಾರೆ ಧನಂಜಯ.
*ಜುಲೈನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ
*ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.