ADVERTISEMENT

Kuberaa Movie: ಜುಲೈ 18ಕ್ಕೆ ಪ್ರೈಮ್‌ನಲ್ಲಿ ‘ಕುಬೇರ’

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 0:10 IST
Last Updated 16 ಜುಲೈ 2025, 0:10 IST
ಧನುಷ್‌ 
ಧನುಷ್‌    

ಕಳೆದ ಜೂನ್‌ 20ರಂದು ತೆರೆಕಂಡಿದ್ದ ತಮಿಳು ನಟ ಧನುಷ್‌ ನಟನೆಯ ‘ಕುಬೇರ’ ಸಿನಿಮಾ ಶೀಘ್ರದಲ್ಲೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಪ್ರೈಮ್‌ ವಿಡಿಯೊದಲ್ಲಿ ಜುಲೈ 18ರಂದು ರಿಲೀಸ್‌ ಆಗಲಿದೆ.   

‘ಡಾಲರ್‌ ಡ್ರೀಮ್ಸ್‌’, ‘ಆನಂದ್‌’, ‘ಹ್ಯಾಪಿ ಡೇಸ್‌’ ಖ್ಯಾತಿಯ ನಿರ್ದೇಶಕ ಶೇಖರ್‌ ಕಮ್ಮುಲ ನಿರ್ದೇಶನದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ₹100 ಕೋಟಿ ಗಳಿಕೆ ಮಾಡಿದೆ. ತೆಲುಗು ನಟ ನಾಗಾರ್ಜುನ, ರಶ್ಮಿಕಾ ಮಂದಣ್ಣ, ಜಿಮ್‌ ಸರಬ್‌ ಹಾಗೂ ದಿಲೀಪ್‌ ತಾಹಿಲ್‌ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ‘ದೇವ’ ಎಂಬ ಪಾತ್ರದಲ್ಲಿ ಧನುಷ್‌ ನಟಿಸಿದ್ದು, ತಿರುಪತಿಯಲ್ಲಿ ನೆಲೆಸಿರುವ ಭಿಕ್ಷುಕನಾಗಿ ಕಾಣಿಸಿಕೊಂಡಿದ್ದಾರೆ. ಸುನೀಲ್‌ ನಾರಂಗ್‌ ಹಾಗೂ ಪುಸ್‌ಕುರ್‌ ರಾಮ್‌ಮೋಹನ್‌ ರಾವ್‌ ನಿರ್ಮಾಣ ಮಾಡಿರುವ ಈ ಚಿತ್ರವು ಐದು ಭಾಷೆಗಳಲ್ಲಿ ತೆರೆಕಂಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT