ADVERTISEMENT

ಧನ್ಯಾ ರಾಮ್‌ಕುಮಾರ್ ನಟನೆಯ ‘ನಿನ್ನ ಸನಿಹಕೆ’ ಏಪ್ರಿಲ್‌ನಲ್ಲಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 13:09 IST
Last Updated 18 ಫೆಬ್ರುವರಿ 2021, 13:09 IST
‘ನಿನ್ನ ಸನಿಹಕೆ’ ಚಿತ್ರದಲ್ಲಿ ಸೂರಜ್‌ ಗೌಡ ಮತ್ತು ಧನ್ಯಾ ರಾಮ್‌ಕುಮಾರ್‌
‘ನಿನ್ನ ಸನಿಹಕೆ’ ಚಿತ್ರದಲ್ಲಿ ಸೂರಜ್‌ ಗೌಡ ಮತ್ತು ಧನ್ಯಾ ರಾಮ್‌ಕುಮಾರ್‌   

‘ನಿನ್ನ ಸನಿಹಕೆ’ ಸಿನಿಮಾ ಸೆಟ್ಟೇರಿದಾಗಿನಿಂದ ಈ ಸಿನಿಮಾದ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಯಾಕೆಂದರೆ ಇದರ ಮೂಲಕ ರಾಜ್‌ಕುಮಾರ್ ಕುಟುಂಬದ ಮೊದಲ ಹೆಣ್ಣು ಕುಡಿಯೊಬ್ಬರು ನಾಯಕಿಯಾಗಿ ಚಂದನವನಕ್ಕೆ ಕಾಲಿರಿಸುತ್ತಿದ್ದಾರೆ. ವರನಟ ರಾಜ್‌ಕುಮಾರ್ ಮೊಮ್ಮಗಳು, ನಟರಾದ ರಾಮ್‌ಕುಮಾರ್ ಮಗಳು ಧನ್ಯಾ ರಾಮ್‌ಕುಮಾರ್‌ ನಿನ್ನ ಸನಿಹಕೆ ಚಿತ್ರದ ನಾಯಕಿ. ಸೂರಜ್‌ ಗೌಡ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ತಾವೇ ಮುಖ್ಯಪಾತ್ರದಲ್ಲೂ ನಟಿಸಿದ್ದಾರೆ. ಸದ್ಯ ಸಿನಿಮಾ ಬಿಡುಗಡೆಯ ಹಂತದಲ್ಲಿದ್ದು ಏಪ್ರಿಲ್‌ ತಿಂಗಳಿನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ ಸೂರಜ್‌.

ಸಿನಿಮಾ ಬಿಡುಗಡೆ ದಿನಾಂಕವನ್ನು ಸೂರಜ್ ಇನ್ನೂ ತಿಳಿಸಿಲ್ಲ. ಆದರೆ ಈ ಸಿನಿಮಾದ ಬಗ್ಗೆ ರಾಜ್‌ ಕುಟುಂಬದ ಅಭಿಮಾನಿಗಳು ಕಾತರರಾಗಿದ್ದಾರೆ. ಈಗಾಗಲೇ ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿದ್ದು ಸಿನಿರಸಿಕರ ಮನ ಗೆದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT