ADVERTISEMENT

Sandalwood: ‘ಧರ್ಮಂ‌’ ಚಿತ್ರದ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 23:30 IST
Last Updated 25 ನವೆಂಬರ್ 2025, 23:30 IST
ವಿರಾಣಿಕ ಶೆಟ್ಟಿ
ವಿರಾಣಿಕ ಶೆಟ್ಟಿ   

ಜಾತಿ, ಧರ್ಮದ ಕಥೆ ಹೊಂದಿರುವ ‘ಧರ್ಮಂ‌’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಚಿತ್ರಕ್ಕೆ ನಾಗಮುಖ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ತರುಣ್ ಕಿಶೋರ್ ಸುಧೀರ್ ಟ್ರೇಲರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

‘ಜಾತಿ ಮತ್ತು ಹಿಂದು ಧರ್ಮದ ಹಿನ್ನೆಲೆ ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಹಿಂದುತ್ವ ಉಳಿಯಬೇಕು ಎನ್ನುವುದು ನಮ್ಮ ಉದ್ದೇಶ. ಹಿಂದೂ ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇವೆ. ಮೇಲು, ಕೀಳಿನಿಂದ‌ ನಮ್ಮ ಧರ್ಮ ಹೇಗೆ ಸೊರಗುತ್ತಿದೆ ಎಂಬುದೇ ಚಿತ್ರಕಥೆ’ ಎಂದರು ನಿರ್ದೇಶಕ.

ಸಾಯಿ ಶಶಿಕುಮಾರ್‌ಗೆ ವಿರಾಣಿಕ ಶೆಟ್ಟಿ ಜೋಡಿಯಾಗಿದ್ದಾರೆ. ಡಿಸೆಂಬರ್ 5ರಂದು ಚಿತ್ರ ತೆರೆಗೆ ಬರಲಿದೆ. ‘ಚಿತ್ರದಲ್ಲಿ ನೀಲಾ ಎನ್ನುವ ಪಾತ್ರ ಮಾಡಿದ್ದೇನೆ. ಗಂಡಸರನ್ನು ಕಂಡರೆ ಕತ್ತೆತ್ತಿ‌ ನೋಡದ ಹುಡುಗಿ ಪಾತ್ರವದು. ಅನೇಕರು ನಮ್ಮ ಚಿತ್ರದ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‌ ಇದು ಇನ್ನಷ್ಟು ಆತ್ಮ‌ವಿಶ್ವಾಸ ಹೆಚ್ಚಿಸಿದೆ’ ಎಂದರು ನಾಯಕಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.