ADVERTISEMENT

ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಾಗ ಧರ್ಮೇಂದ್ರ ಭಾವುಕರಾಗಿ ಹೇಳಿದ್ದೇನು ಗೊತ್ತಾ?

ಮೃತ್ಯುಂಜಯ ಬೋಸ್
Published 24 ನವೆಂಬರ್ 2025, 12:31 IST
Last Updated 24 ನವೆಂಬರ್ 2025, 12:31 IST
<div class="paragraphs"><p>ಧರ್ಮೇಂದ್ರ</p></div>

ಧರ್ಮೇಂದ್ರ

   

ಮುಂಬೈ: ಧರ್ಮೇಂದ್ರ ಅವರನ್ನು ಹಿಂದಿ ಚಲನಚಿತ್ರ ಪ್ರಪಂಚದ ಗ್ರೀಕ್‌ ದೇವರಿದ್ದಂತೆ ಎಂದೇ ಪರಿಗಣಿಸಲಾಗಿತ್ತು. ಅವರ ಸ್ಟೈಲ್‌, ಹೃದಯಪೂರ್ವಕ ಮಾತುಗಳು ಎಲ್ಲರನ್ನು ಸೆಳೆಯುತ್ತಿತ್ತು.

ಅದಕ್ಕೆ ಉತ್ತಮ ಉದಾಹರಣೆ ಎಂದರೆ 1997ರಲ್ಲಿ ‘ಫಿಲ್ಮ್‌ಫೇರ್‌ ಜೀವಮಾನ ಸಾಧನೆ ಪ್ರಶಸ್ತಿ’ ಸಮಾರಂಭದಲ್ಲಿ ಧರ್ಮೇಂದ್ರ ಅವರಾಡಿದ್ದ ಮಾತುಗಳು.

ADVERTISEMENT

ಧರ್ಮೇಂದ್ರ ಅವರು ತಮ್ಮ ಐಕಾನ್‌ ಎಂದೇ ಪರಿಗಣಿಸಿದ್ದ ದಿಲೀಪ್‌ ಕುಮಾರ್‌ ಹಾಗೂ ಅಂದಿನ ಕಾಲದಲ್ಲಿ ಬಾಲಿವುಡ್‌ನಲ್ಲಿ ಹೊಸ ಭರವಸೆಯ ನಟನಾಗಿ ಮಿಂಚುತ್ತಿದ್ದ ಶಾರುಕ್‌ ಖಾನ್‌ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

ಸಿನಿಪಯಣದಲ್ಲಿ 37 ವರ್ಷಗಳು ಕಳೆದ ಬಳಿಕ ಅವರಿಗೆ ಈ ಪ್ರಶಸ್ತಿ ಒಲಿದಿತ್ತು. ಪ್ರಶಸ್ತಿ ಪಡೆದ ಬಳಿಕ ಧರ್ಮೇಂದ್ರ ಅವರು ನುಡಿದಿದ್ದ ಮಾತುಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ಇತರ ಯುವ ನಟರಂತೆ ನಾನೂ ನಟನಾಗಲು ಬಯಸಿದ್ದೆ. ಆದರೆ ಈ ಬಗ್ಗೆ ನನ್ನ ಕುಟುಂಬದೊಂದಿಗೆ ಹಂಚಿಕೊಂಡಿರಲಿಲ್ಲ. ಏಕೆಂದರೆ ಯಾರಾದರೂ ಅವರೆದುರು ನಟನಾಗಬೇಕು ಎಂದು ಹೇಳಿಕೊಂಡರೆ ನಗುತ್ತಿದ್ದರು. ಹೀಗಾಗಿ ನನ್ನ ಅಮ್ಮನಿಗೆ ಮತ್ತು ಆತ್ಮೀಯ ಸ್ನೇಹಿತರಿಗೆ ನನ್ನ ಕನಸಿನ ಬಗ್ಗೆ ಹೇಳಿಕೊಂಡಿದ್ದೆ. ಹಣವನ್ನು ಹೊಂದಿಸಿ ಬಾಂಬೆಗೆ (ಈಗಿನ ಮುಂಬೈ) ಕಳುಹಿಸುವಂತೆ ಹೇಳಿದ್ದೆ. ಆದರೆ ನಾನು ಹಿರಿಯ ಮಗನಾದ್ದರಿಂದ ಅಮ್ಮನಿಗೆ ಸಂಶಯವಿತ್ತು. ಈ ಕೆಲಸ ಸುಲಭದ್ದಲ್ಲ ಎಂದು ಆಕೆ ನನಗೆ ಹೇಳಿದ್ದಳು’.

‘ಕೊನೆಯಲ್ಲಿ ಫಿಲ್ಮ್‌ಫೇರ್‌ ನಿಯತಕಾಲಿಕೆಯಲ್ಲಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೆ. ಫಿಲ್ಮ್‌ಫೇರ್‌ ನನ್ನನ್ನು ಕರೆದು ನಟನಾಗಿ ಆಯ್ಕೆ ಮಾಡಿತು. ಆಗ ನಾನು ಧರ್ಮೇಂದ್ರ ಆದೆ. ಅದು ಸಾಧ್ಯವಾಗಿದ್ದು ಫಿಲ್ಮ್‌ಫೇರ್‌ನಿಂದ. 60ರ ದಶಕದಲ್ಲಿ ಹಲವು ಹಿಟ್‌ ಚಿತ್ರಗಳನ್ನು ನೀಡಿದ್ದೆ. ಫಿಲ್ಮ್‌ಫೇರ್‌ನ ಪ್ರಶಸ್ತಿ ಪಡೆಯಲು ಪ್ರತೀ ವರ್ಷ ಸೂಟು ಮತ್ತು ಟೈ ಖರೀದಿಸುತ್ತಿದ್ದೆ. ಆದರೆ ಎಂದಿಗೂ ಪ್ರಶಸ್ತಿ ಸ್ವೀಕರಿಸಿರಲಿಲ್ಲ. ಸೂಟ್‌ಅನ್ನು ಖರೀದಿಸುವುದನ್ನು ನಿಲ್ಲಿಸಿದ್ದೆ. ಬಹುಷಃ ನಾನು ಟಿ–ಶರ್ಟ್‌ ಧರಿಸಿ ಪ್ರಶಸ್ತಿ ಪಡೆಯಬಹುದು ಎಂದುಕೊಂಡಿದ್ದೆ. 37 ವರ್ಷಗಳ ಬಳಿಕ ನನಗೆ ಈ ಟ್ರೋಫಿ ಸಿಗುತ್ತಿದೆ. ಈ ಒಂದರಲ್ಲೇ ನಾನು ನನ್ನ 15 ವರ್ಷಗಳ ವೃತ್ತಿಜೀವನ್ನು ಕಾಣುತ್ತಿದ್ದೇನೆ’ ಎಂದು ಭಾವುಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.