ADVERTISEMENT

ಡಾ.ರಾಜ್‌ಕುಮಾರ್‌ ಮೊಮ್ಮಗ ಧೀರೆನ್‌ ನಟನೆಯ ‘ಶಿವ 143’ ಚಿತ್ರದ ಟ್ರೈಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 11:58 IST
Last Updated 22 ಫೆಬ್ರುವರಿ 2022, 11:58 IST
ಧೀರೆನ್‌ ರಾಮ್‌ಕುಮಾರ್‌
ಧೀರೆನ್‌ ರಾಮ್‌ಕುಮಾರ್‌   

ವರನಟ ಡಾ.ರಾಜ್‌ಕುಮಾರ್‌ ಅವರ ಮೊಮ್ಮಗ, ಪೂರ್ಣಿಮಾ ಹಾಗೂ ನಟ ರಾಮ್‌ಕುಮಾರ್‌ ಪುತ್ರ ಧೀರೆನ್‌ ರಾಮ್‌ಕುಮಾರ್‌ ನಟನೆಯ ‘ಶಿವ 143’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.

ಕಳೆದ ವರ್ಷವೇಅನಿಲ್‌ ಕುಮಾರ್‌ ನಿರ್ದೇಶನದ ಈ ಚಿತ್ರದ ಚಿತ್ರೀಕರಣ, ಡಬ್ಬಿಂಗ್‌ ಪೂರ್ಣಗೊಂಡಿತ್ತು. ಆದರೆ ಲಾಕ್‌ಡೌನ್‌ ಕಾರಣದಿಂದಾಗಿ ಚಿತ್ರ ಬಿಡುಗಡೆಯನ್ನು ಚಿತ್ರತಂಡವು ಮುಂದೂಡಿತ್ತು. ಧೀರೆನ್‌ ಅವರ ಚೊಚ್ಚಲ ಚಿತ್ರವಾಗಿರುವ ಕಾರಣ ಥಿಯೇಟರ್‌ಗಳಲ್ಲೇ ಸಿನಿಮಾ ಬಿಡುಗಡೆಗೆ ಚಿತ್ರತಂಡವು ಕಾದಿತ್ತು.

ಸಿನಿಮಾದಲ್ಲಿ ಧೀರೆನ್‌ಗೆ ಜೋಡಿಯಾಗಿ ನಟಿ ಮಾನ್ವಿತಾ ಕಾಮತ್‌ ನಟಿಸಿದ್ದಾರೆ.ಬೋಲ್ಡ್‌, ಡೇರಿಂಗ್‌ ಪಾತ್ರದಲ್ಲಿ ಮಾನ್ವಿತಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಕ್ಲೈಮ್ಯಾಕ್ಸ್‌ನಲ್ಲಿ ನೆಗೆಟಿವ್‌ ಶೇಡ್‌ನಲ್ಲೂ ಕಾಣಿಸಿಕೊಂಡಿದ್ದಾರೆ.

ADVERTISEMENT

ಚಿತ್ರದ ಟ್ರೇಲರ್‌ಗೆ ನಟ ಶಿವರಾಜ್‌ಕುಮಾರ್‌ ಶುಭಾಶಯ ಕೋರಿದ್ದು, ಧೀರೆನ್‌ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ಜಗ್ಗೇಶ್‌ ಕೂಡಾ ಟ್ರೇಲರ್‌ ಬಗ್ಗೆ ತಮ್ಮ ಅಭಿಪ್ರಾಯವನ್ನು ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ. ‘ರಾಜಣ್ಣನ ವಂಶದ 3ನೇ ತಲೆಮಾರು. ಕನ್ನಡದ ಮನಗಳು ಈ ಕಂದಮ್ಮನ ಹರಸಿ ಹಾರೈಸಿ’ ಎಂದು ಕೋರಿದ್ದಾರೆ.

ಜಯಣ್ಣ ಫಿಲ್ಮ್ಸ್‌ ಬ್ಯಾನರ್‌ನಡಿ ಚಿತ್ರಕ್ಕೆ ಜಯಣ್ಣ, ಭೋಗೇಂದ್ರ ಹಾಗೂ ಡಾ.ಸೂರಿ ಬಂಡವಾಳ ಹೂಡಿದ್ದಾರೆ. ಆರಂಭದಲ್ಲಿ ‘ದಾರಿ ತಪ್ಪಿದ ಮಗ’ ಎಂಬ ಶೀರ್ಷಿಕೆಯಡಿ ಆರಂಭವಾದ ಈ ಚಿತ್ರಕ್ಕೆ ನಂತರದಲ್ಲಿ ‘ಶಿವ 143’ ಎಂದು ಹೆಸರಿಡಲಾಗಿತ್ತು. ಚಿತ್ರದ ಮೊದಲ ವಿಡಿಯೊ ಹಾಡು ‘ಮಳೆ ಹನಿಯೇ’ ಇತ್ತೀಚೆಗೆ ಬಿಡುಗಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.