ADVERTISEMENT

Cinema: ಆಯಿಲ್‌ ಮಾಫಿಯಾ ಸುತ್ತಲಿನ 'ಡೀಸೆಲ್‌' ಅ.17ರಂದು ತೆರೆಗೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 23:30 IST
Last Updated 15 ಅಕ್ಟೋಬರ್ 2025, 23:30 IST
ಅತುಲ್ಯ ರವಿ, ಹರೀಶ್ ಕಲ್ಯಾಣ್  
ಅತುಲ್ಯ ರವಿ, ಹರೀಶ್ ಕಲ್ಯಾಣ್     

ತಮಿಳಿನ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಡೀಸೆಲ್’ ಅ.17ರಂದು ತೆರೆಕಾಣುತ್ತಿದೆ. ಕನ್ನಡದಲ್ಲಿಯೂ ಡಬ್‌ ಆಗಿ ಈ ಸಿನಿಮಾ ತೆರೆಗೆ ಬರುತ್ತಿದೆ.

ಷಣ್ಮುಗಂ ಮುತ್ತುಸಾಮಿ ಈ ಸಿನಿಮಾವನ್ನು ಬರೆದು ನಿರ್ದೇಶಿಸಿದ್ದಾರೆ. ಹರೀಶ್ ಕಲ್ಯಾಣ್ ಹಾಗೂ ಅತುಲ್ಯ ರವಿ ಜೋಡಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಡೀಸೆಲ್, ಪೆಟ್ರೋಲ್ ದಿನನಿತ್ಯ ಬಳಸುವ ವಸ್ತುಗಳು. ಇದರಲ್ಲಿ ನಡೆಯುವ ಮಾಫಿಯಾವನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ನೈಜ ಘಟನೆ ಕುರಿತ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ’ ಎಂದರು ಷಣ್ಮುಗಂ. 

ಅತುಲ್ಯ ರವಿ ಈ ಸಿನಿಮಾದಲ್ಲಿ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಪ್ರೇಮಕಥೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಹರೀಶ್‌ ಕಲ್ಯಾಣ್‌ ಈ ಸಿನಿಮಾದಲ್ಲಿ ಆ್ಯಕ್ಷನ್‌ ಹೀರೊ ಆಗಿದ್ದಾರೆ. ವಿನಯ್ ರೈ, ಸಚಿನ್ ಕೇಧೇಕರ್, ಸಾಯಿ ಕುಮಾರ್, ಅನನ್ಯ, ಕರುಣಾಸ್, ಬೋಸ್ ವೆಂಕಟ್, ರಮೇಶ್ ತಿಲಕ್, ಕಾಳಿ ವೆಂಕಟ್, ವಿವೇಕ್ ಪ್ರಸನ್ನ, ಜಾಕಿರ್ ಹುಸೇನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರವನ್ನು ಥರ್ಡ್ ಐ ಎಂಟರ್‌ಟೇನ್ಮೆಂಟ್‌ ಹಾಗೂ ಎಸ್.ಪಿ.ಸಿನಿಮಾಸ್ ನಿರ್ಮಾಣ ಮಾಡಿದೆ. ಧಿಬು ನಿನಾನ್ ಥಾಮಸ್ ಸಂಗೀತ, ಎಂ.ಎಸ್.ಪ್ರಭು ಮತ್ತು ರಿಚರ್ಡ್ ಎಂ.ನಾಥನ್ ಛಾಯಾಚಿತ್ರಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಚಿತ್ರಕ್ಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.