ADVERTISEMENT

ನಟ ದಿಲೀಪ್ ಕುಮಾರ್ ಚೇತರಿಕೆ: ಎರಡ್ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ

98 ವರ್ಷದ ದಿಲೀಪ್ ಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2021, 16:10 IST
Last Updated 6 ಜೂನ್ 2021, 16:10 IST
ದಿಲೀಪ್ ಕುಮಾರ್, ಚಿತ್ರ: ದಿಲೀಪ್ ಕುಮಾರ್ ಟ್ವಿಟರ್ ಹ್ಯಾಂಡಲ್
ದಿಲೀಪ್ ಕುಮಾರ್, ಚಿತ್ರ: ದಿಲೀಪ್ ಕುಮಾರ್ ಟ್ವಿಟರ್ ಹ್ಯಾಂಡಲ್   

ಮುಂಬೈ:ಬಾಲಿವುಡ್‌ನ ಖ್ಯಾತನಟ ದಿಲೀಪ್ ಕುಮಾರ್ ಅವರಿಗೆ ಭಾನುವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ, ಇಲ್ಲಿನ ಪಿ.ಡಿ.ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೀಗ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಲಾಗಿದೆ. ‘ಸದ್ಯ ದಿಲೀಪ್ ಕುಮಾರ್ ಚೇತರಿಸಿಕೊಳ್ಳುತ್ತಿದ್ದುಎರಡ್ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಅವರ ಸಾವಿನ ವದಂತಿಗಳನ್ನು ನಂಬಬೇಡಿ’ಎಂದು ತಿಳಿಸಿದೆ.

ಅವರ ಪತ್ನಿ ಸಾಯಿರಾ ಬಾನು ಅವರು, ಟ್ವೀಟರ್ ಖಾತೆಯನ್ನು ನಿಭಾಯಿಸುತ್ತಿದ್ದು, ಆರೋಗ್ಯ ಸ್ಥಿತಿ ಕುರಿತಂತೆ ಮಾಹಿತಿ ನೀಡುತ್ತಿದ್ದಾರೆ.

ADVERTISEMENT

98 ವರ್ಷದ ದಿಲೀಪ್ ಕುಮಾರ್ ಚಿತ್ಸೆಯ ಉಸ್ತುವಾರಿಯನ್ನು ಹಿರಿಯ ವೈದ್ಯ ಡಾ.ಜಲೀಲ್‌ ಪಾರ್ಕರ್‌, ಹೃದ್ರೋಗ ತಜ್ಞ ಡಾ.ನಿತಿನ್‌ ಗೋಖಲೆ ನೇತೃತ್ವದ ಪರಿಣತರ ತಂಡ ಗಮನಿಸುತ್ತಿದೆ.

ಕಳೆದ ವರ್ಷ ದಿಲೀಪ್‌ ಕುಮಾರ್ ಅವರ ತಮ್ಮಂದಿರಾದ ಇಶಾನ್‌ ಖಾನ್‌ (90) ಮತ್ತು ಅಸ್ಲಂ ಖಾನ್‌ (88) ಅವರು ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.