ADVERTISEMENT

‘ಗಜರಾಮ’ನಿಗೆ ರಾಗಿಣಿ ಬಲ: ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಾಯಕ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2023, 23:29 IST
Last Updated 5 ಅಕ್ಟೋಬರ್ 2023, 23:29 IST
ರಾಗಿಣಿ
ರಾಗಿಣಿ   

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟನೆಯ ‘ಗಜರಾಮ’ ಚಿತ್ರದಲ್ಲಿ ನಟಿ ರಾಗಿಣಿ ಹೆಜ್ಜೆ ಹಾಕಿದ್ದಾರೆ. ಹಾಡಿನ ಚಿತ್ರೀಕರಣ ಇತ್ತೀಚೆಗಷ್ಟೇ ನಡೆಯಿತು.

ಝಗಮಗಿಸುವ ಸೆಟ್‌ನಲ್ಲಿ, ಧನು ಮಾಸ್ಟರ್ ಕೊರಿಯೋಗ್ರಫಿಯಲ್ಲಿ, ಮನೋಮೂರ್ತಿ ಸಂಯೋಜಿಸಿದ ಗೀತೆಗೆ ತುಪ್ಪದ ಬೆಡಗಿ ರಾಗಿಣಿ‌ ಚಿತ್ರತಂಡದ ಜೊತೆ ಹೆಜ್ಜೆ ಹಾಕಿದರು.

‘ಹೊಸ ಹೊಸ ಪ್ರಯತ್ನಗಳು ನಮ್ಮ ಚಿತ್ರೋದ್ಯಮದಲ್ಲಿ ಆಗಬೇಕು. ಕನ್ನಡ ಸಿನಿಮಾಗಳು ಒಳ್ಳೆ ರೀತಿಯಲ್ಲಿ ಬೆಳೆಯುತ್ತಿವೆ. ಅದನ್ನು ನೋಡಿ ಹೆಮ್ಮೆ ಎನ್ನಿಸುತ್ತದೆ’ ಎಂದರು ರಾಗಿಣಿ.

ADVERTISEMENT

ಸುನಿಲ್ ಕುಮಾರ್ ನಿರ್ದೇಶಿಸಿರುವ ಚಿತ್ರವನ್ನು ಬೆಂಗಳೂರು, ಮೈಸೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ನರಸಿಂಹಮೂರ್ತಿ ಬಂಡವಾಳ ಹೂಡಿದ್ದಾರೆ. ‘ಶಿಷ್ಯ’ ದೀಪಕ್ ಪೊಲೀಸ್ ಪಾತ್ರದಲ್ಲಿ, ತೆಲುಗಿನ ಖ್ಯಾತ ಖಳನಟ ಕಬೀರ್ ಸಿಂಗ್ ಖಳನಾಯಕನಾಗಿ, ತಪಸ್ವಿನಿ ರಾಜವರ್ಧನ್‌ಗೆ ಜೋಡಿಯಾಗಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.