ADVERTISEMENT

ಕ್ರಿಕೆಟರ್ ರೋಹಿತ್ ಜೊತೆ ಸಪ್ತಪದಿ ತುಳಿದ ನಿರ್ದೇಶಕ ಶಂಕರ್ ಪುತ್ರಿ ಐಶ್ವರ್ಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 12:39 IST
Last Updated 27 ಜೂನ್ 2021, 12:39 IST
ಐಶ್ವರ್ಯಾ ಶಂಕರ್‌ – ರೋಹಿತ್ ದಾಮೋದರನ್ ವಿವಾಹ ಭಾನುವಾರ ಮಹಾಬಲಿಪುರಂನಲ್ಲಿ ನಡೆಯಿತು.
ಐಶ್ವರ್ಯಾ ಶಂಕರ್‌ – ರೋಹಿತ್ ದಾಮೋದರನ್ ವಿವಾಹ ಭಾನುವಾರ ಮಹಾಬಲಿಪುರಂನಲ್ಲಿ ನಡೆಯಿತು.   

ಖ್ಯಾತ ನಿರ್ದೇಶಕ ಎಸ್. ಶಂಕರ್ ಅವರ ಪುತ್ರಿ ಐಶ್ವರ್ಯಾ ಅವರು ಕ್ರಿಕೆಟಿಗ ರೋಹಿತ್ ದಾಮೋದರನ್ ಜತೆ ಭಾನುವಾರ ದಾಂಪತ್ಯ ಬದುಕಿಗೆ ಕಾಲಿಟ್ಟರು.

ಮಹಾಬಲಿಪುರಂನಲ್ಲಿ ಸೀಮಿತ ಸಂಖ್ಯೆಯ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅವರ ಪುತ್ರ ಉದಯನಿಧಿ ಸ್ಟಾಲಿನ್, ವೈದ್ಯಕೀಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಮಾ ಸುಬ್ರಮಣಿಯಂ ಮದುವೆಗೆ ಬಂದಿದ್ದರು.

ಐಶ್ವರ್ಯಾ ಹಾಗೂ ರೋಹಿತ್ ಅವರ ವಿವಾಹದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನವ ದಂಪತಿಗೆ ಶುಭಾಶಯಗಳು ಹರಿದುಬಂದಿವೆ. ಕೋವಿಡ್‌ ಆತಂಕ ನಿವಾರಣೆ ಆದ ಬಳಿಕ ಚೆನ್ನೈನಲ್ಲಿ ಆರತಕ್ಷತೆ ನಡೆಸಲು ನಿರ್ದೇಶಕ ಶಂಕರ್ ನಿರ್ಧರಿಸಿದ್ದಾರೆ.

ADVERTISEMENT

ರೋಹಿತ್ ದಾಮೋದರನ್ ಅವರು ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್‌)ನ ಆಟಗಾರ. ರೋಹಿತ್ ತಂದೆ ದಾಮೋದರನ್ ಉದ್ಯಮಿ. ಟಿಎನ್‌ಪಿಎಲ್‌ನ ‘ಮಧುರೈ ಪ್ಯಾಂಥರ್ಸ್’ ಫ್ರಾಂಚೈಸಿ ಒಡೆತನವನ್ನು ದಾಮೋದರನ್ ಹೊಂದಿದ್ದಾರೆ. ರೋಹಿತ್ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐಶ್ವರ್ಯಾ ಅವರು ವೈದ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.