ADVERTISEMENT

ಬಿಸಿಲಿಗೆ ನಶೆ ಏರಿಸಿದ ದಿಶಾ!

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:32 IST
Last Updated 26 ಮಾರ್ಚ್ 2019, 19:32 IST
ದಿಶಾ ಪಟಾನಿ
ದಿಶಾ ಪಟಾನಿ   

ಅಂತರ್ಜಾಲದಲ್ಲಿ ತಮ್ಮ ಮಾದಕ ಭಂಗಿಗಳ ಮೂಲಕ ನಟಿ ದಿಶಾ ಪಟಾನಿ ನೋಡುಗರೆದೆಯಲ್ಲಿ ಕಿಚ್ಚು ಹಬ್ಬಿಸುವ ಕಲೆಯನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಈಚೆಗೆ ದಿಶಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರಗಳು.

ಬೇಸಿಗೆಯ ಸೆಖೆಗೆ ಕನಿಷ್ಠ ಉಡುಪು ಧರಿಸಿ ದಿಶಾ ಕೊಟ್ಟಿರುವ ಭಾವಭಂಗಿಗಳು ನೋಡುಗರನ್ನು ಕ್ಷಣಕಾಲ ಹಿಡಿದು ನಿಲ್ಲಿಸುವಂತಿವೆ.

ಒಳ ಉಡುಪುಗಳ ಬ್ರ್ಯಾಂಡ್‌ ಧರಿಸಿ ದಿಶಾ ತೆಗೆಸಿಕೊಂಡಿರುವ ಚಿತ್ರಗಳ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಅದರಲ್ಲೂ ಪಿಂಕ್ ಮೊನೊಕಿನಿ ಧರಿಸಿ ‘ಹಲೋ ಸಮ್ಮರ್’ ಎಂದು ದಿಶಾ ಬೇಸಿಗೆಗೆ ಹಲೋ ಹೇಳಿರುವ ರೀತಿ ಮಾದಕವಾಗಿದೆ. ದಿಶಾಳ ಸೌಂದರ್ಯದ ಮುಂದೆ ಬೇಸಿಗೆಯ ಬಿಸಿಲೂ ಮಂಕಾಗುವಂತಿದೆ.

ADVERTISEMENT

‘ಭಾಗಿ–2’ ದಲ್ಲಿ ನಾಯಕಿಯಾಗಿದ್ದ ದಿಶಾಳ ಹೆಸರು ನಟ ಟೈಗರ್ ಶ್ರಾಫ್ ಜತೆಗೆ ಕೇಳಿಬಂದಿತ್ತು. ಇಬ್ಬರೂ ಈ ಬಗ್ಗೆ ಸ್ಪಷ್ಟನೆ ನೀಡಲಿಲ್ಲವಾದರೂ, ಇಬ್ಬರೂ ಜತೆಯಾಗಿ ವಿದೇಶಗಳ ಬೀಚ್‌ಗಳಲ್ಲಿ ಕಾಲ ಕಳೆದಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗಿತ್ತು. ಸಲ್ಮಾನ್ ಖಾನ್ ಜತೆಗೆ ‘ಭಾರತ್’ ಸಿನಿಮಾದಲ್ಲಿ ನಟಿಸುತ್ತಿರುವ ದಿಶಾ ಅದಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸಿ ಸುದ್ದಿಯಾಗಿದ್ದರು. ಈ ಸಿನಿಮಾ ಜೂನ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.