
ಮೋಹನ್ ಲಾಲ್ ನಟಿಸಿ, ಜೀತು ಜೋಸೆಫ್ ನಿರ್ದೇಶಿಸುತ್ತಿರುವ ‘ದೃಶ್ಯಂ–3’ ಚಿತ್ರೀಕರಣ ಮುಕ್ತಾಯಗೊಂಡಿದೆ. ಮೋಹನ್ ಲಾಲ್ ಚಿತ್ರದ ಕೊನೆಯ ದಿನದ ಚಿತ್ರೀಕರಣ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
2013ರಲ್ಲಿ ‘ದೃಶ್ಯಂ’ ಸಿನಿಮಾದೊಂದಿಗೆ ಈ ಜೋಡಿ ಮೋಡಿ ಮಾಡಿತ್ತು. ಸಿನಿಮಾವೊಂದರ ಸೀಕ್ವೆಲ್ ಮೂಲ ಸಿನಿಮಾಕ್ಕಿಂತ ಹೆಚ್ಚು ಯಶಸ್ಸು ಕಾಣುವುದು ಬಲು ವಿರಳ. ಆದರೆ 2021ರಲ್ಲಿ ತೆರೆಕಂಡ ದೃಶ್ಯಂ 2 ಮೂಲ ಸಿನಿಮಾದಷ್ಟೇ ಯಶಸ್ಸು ಗಳಿಸಿತು. ಬೇರೆ ಭಾಷೆಗಳಿಗೂ ಈ ಚಿತ್ರ ರಿಮೇಕ್ ಆಗಿ ಯಶಸ್ಸು ಕಂಡಿತ್ತು. ಅದಾದ ಬಳಿಕ ದೃಶ್ಯಂ 3 ಚಿತ್ರ ಘೋಷಿಸಲಾಗಿತ್ತು.
ಕಥಾನಾಯಕ ಜಾರ್ಜ್‌ಕುಟ್ಟಿಯ ಕಥೆಯೇ ಇಲ್ಲಿ ಮುಂದುವರಿಯಲಿದೆ ಎಂದು ಜೀತು ಹೇಳಿದ್ದರು. ಮೀನಾ, ಅನ್ಸಿಬಾ ಹಸನ್ ಮತ್ತು ಎಸ್ತರ್ ಅನಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅನಿಲ್ ಜಾನ್ಸನ್ ಸಂಗೀತ, ಸತೀಶ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.