ADVERTISEMENT

ಡ್ರಗ್ಸ್ ಪ್ರಕರಣ: ‌ದಿಗಂತ್-ಐಂದ್ರಿತಾ ವಿಚಾರಣೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 10:42 IST
Last Updated 16 ಸೆಪ್ಟೆಂಬರ್ 2020, 10:42 IST
ಸಿಸಿಬಿ ಕಚೇರಿಯಲ್ಲಿ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ
ಸಿಸಿಬಿ ಕಚೇರಿಯಲ್ಲಿ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ   

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣ ಸಂಬಂಧ ಸಿಸಿಬಿ ಕಚೇರಿಯಲ್ಲಿ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಅವರ ವಿಚಾರಣೆ ಮುಗಿದಿದ್ದು, ಅಗತ್ಯವಿದ್ದರೆ ವಿಚಾರಣೆಗೆ ಮತ್ತೆ ಕರೆಯುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಇಬ್ಬರೂ ಹಾಜರಾಗಿದ್ದರು. ಸಿಸಿಬಿ ಅಧಿಕಾರಿಗಳು ಇಬ್ಬರಿಗೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು. ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಯಿತು.

ವಿಚಾರಣೆ ಮುಗಿಸಿ ಬಳಿಕ ಮಾತನಾಡಿದ ನಟ ದಿಗಂತ್, ‘ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ. ಬೇರೆ ಮಾಹಿತಿ ಬಹಿರಂಗಪಡಿಸದಂತೆ ಸಿಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ. ತನಿಖೆ ನಾವು ಸಹಕಾರ ನೀಡುತ್ತೇವೆ. ವಿಚಾರಣೆಗೆ ಕರೆದರೆ ಮತ್ತೆ ಹಾಜರಾಗುತ್ತೇವೆ’ಎಂದಿದ್ದಾರೆ.

ADVERTISEMENT

‘ಒಂದು ಹಂತದ ವಿಚಾರಣೆ ಮುಗಿದಿದೆ. ಅಗತ್ಯ ಬಿದ್ದರೆ ಮತ್ತೊಂದು ದಿನ ವಿಚಾರಣೆಗೆ ಕರೆಯಲಿದ್ದೇವೆ’ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.