ADVERTISEMENT

EaseMyTrip ಸಹ ಸಂಸ್ಥಾಪಕನ ಜೊತೆ ಡೇಟಿಂಗ್ ವದಂತಿ: ಕಂಗನಾ ಸ್ಪಷ್ಪನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2024, 13:04 IST
Last Updated 24 ಜನವರಿ 2024, 13:04 IST
<div class="paragraphs"><p>ಕಂಗನಾ ರನೌತ್ ಮತ್ತು ನಿಶಾಂತ್ ಪಿಟ್ಟಿ</p></div>

ಕಂಗನಾ ರನೌತ್ ಮತ್ತು ನಿಶಾಂತ್ ಪಿಟ್ಟಿ

   

ಚಿತ್ರ: ಎಕ್ಸ್‌

ಮುಂಬೈ: ಈಸ್‌ ಮೈ ಟ್ರಿಪ್‌ ಸಹ ಸಂಸ್ಥಾಪಕ ನಿಶಾಂತ್‌ ಪಿಟ್ಟಿ ಜೊತೆ ಬಾಲಿವುಡ್ ನಟಿ ಕಂಗನಾ ರನೌತ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಈ ವದಂತಿಗಳಿಗೆ ಕಂಗನಾ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ಅಯೋಧ್ಯೆಯಲ್ಲಿ ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಂಗನಾ ರನೌತ್‌ ಮತ್ತು ನಿಶಾಂತ್ ಪಿಟ್ಟಿ ಜೊತೆಯಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಕಂಗನಾ–ನಿಶಾಂತ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬಂತೆ ಸುದ್ದಿ ಹರಡಿತ್ತು.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ, ತಪ್ಪು ಮಾಹಿತಿಗಳನ್ನು ಹರಡದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

‘ನಿಶಾಂತ್ ಪಿಟ್ಟಿ ಅವರಿಗೆ ಮದುವೆಯಾಗಿದ್ದು, ಕುಟುಂಬದೊಂದಿಗೆ ಅವರು ಸಂತೋಷವಾಗಿದ್ದಾರೆ. ನಾನು ಡೇಟಿಂಗ್ ನಡೆಸುತ್ತಿರುವುದು ನಿಜ. ಸಮಯ ಬಂದಾಗ ಆ ವ್ಯಕ್ತಿಯನ್ನು ನಿಮಗೆ ಪರಿಚಯಿಸುತ್ತೇನೆ. ಈ ರೀತಿಯ ವದಂತಿ ಸೃಷ್ಟಿಸಿ ನಮಗೆ ಮುಜುಗರ ಉಂಟು ಮಾಡಬೇಡಿ. ಫೋಟೊದಲ್ಲಿ ಒಟ್ಟಿಗೆ ನಿಂತಿದ್ದಾರೆ ಎಂಬ ಕಾರಣಕ್ಕೆ ಒಬ್ಬ ಅವಿವಾಹಿತೆ ಮಹಿಳೆಯನ್ನು ಎಲ್ಲರ ಜೊತೆ ಸಂಬಂಧ ಕಟ್ಟಬೇಡಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.