ADVERTISEMENT

Sandalwood: ಫೆ. 20ರಂದು ಎಂಟು ಸಿನಿಮಾಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 0:39 IST
Last Updated 20 ಫೆಬ್ರುವರಿ 2026, 0:39 IST
   

ಈ ಫೆಬ್ರುವರಿಯಲ್ಲಿ 28 ದಿನಗಳಷ್ಟೇ ಇದ್ದು ಕಳೆದ ಎರಡು ಶ್ರುಕವಾರಗಳಲ್ಲಿ ಹದಿನೆಂಟು ಸಿನಿಮಾಗಳು ರಿಲೀಸ್‌ ಆಗಿವೆ. ಇಂದು(ಫೆ.20) ಎಂಟು ಸಿನಿಮಾಗಳು ಇದಕ್ಕೆ ಸೇರ್ಪಡೆಯಾಗುತ್ತಿವೆ.

ಸರಳ ಸುಬ್ಬರಾವ್

70 ರ ದಶಕದ ಕಾಲಘಟ್ಟದ ಕೌಟುಂಬಿಕ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ತ್ರಿವೇಣಿ ಅವರ ಕಾದಂಬರಿ ಆಧರಿಸಿದೆ. ರಿಯಾನ್ ಕ್ರಿಯೇಷನ್ಸ್ ಲಾಂಛನದಲ್ಲಿ ಲೋಹಿತ್ ನಂಜುಂಡಯ್ಯ ನಿರ್ಮಿಸಿರುವ, ಮಂಜು ಸ್ವರಾಜ್ ನಿರ್ದೇಶನದ ಈ ಚಿತ್ರದಲ್ಲಿ ಅಜೇಯ್ ರಾವ್ ಹಾಗೂ ಮಿಶಾ ನಾರಂಗ್ ಜೋಡಿಯಾಗಿ ನಟಿಸಿದ್ದಾರೆ. ರಂಗಾಯಣ ರಘು, ಚಿತ್ಕಲಾ ಬಿರಾದಾರ್‌, ವಿಜಯ್‌ ಚೆಂಡೂರ್‌, ರಘು ರಾಮನಕೊಪ್ಪ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಪ್ರದೀಪ್ ಪದ್ಮಕುಮಾರ್ ಛಾಯಾಚಿತ್ರಗ್ರಹಣ, ಬಸವರಾಜ ಅರಸ್ ಸಂಕಲನ,‌ ಅಮರ್ ಕಲಾ ನಿರ್ದೇಶನ ಹಾಗೂ ಮದನ್‌-ಹರಿಣಿ ನೃತ್ಯ ನಿರ್ದೇಶನವಿದೆ.

ADVERTISEMENT

ರಿಶಿತ್‌ ಶೆಟ್ಟಿ ನಿರ್ದೇಶನದ, ರಿತ್ವಿಕ್ ಮಠದ್ ಹಾಗೂ ಚೈತ್ರಾ ಜೆ.ಆಚಾರ್‌ ಮುಖ್ಯಭೂಮಿಕೆಯಲ್ಲಿರುವ ‘ಮಾರ್ನಮಿ’, ದೇವಿಪ್ರಸಾದ್‌ ಶೆಟ್ಟಿ ನಿರ್ದೇಶನದ, ವಿಜಯ ರಾಘವೇಂದ್ರ ನಟಿಸಿರುವ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’, ದಿನೇಶ್‌ ಕುಮಾರ್‌ ನಿರ್ಮಾಣ ಮಾಡಿ ನಟಿಸಿ, ನಿರ್ದೇಶಿಸಿರುವ ‘ಸೂರಿ ಅಣ್ಣ’, ‘ಫೆಬ್ರವರಿ 30’, ‘ದೊಡ್ಡಣ್ಣ ಪುಟ್ಟಣ್ಣ’ ಹಾಗೂ ‘ಮಿಕ್ಸಿಂಗ್‌ ಪ್ರೀತಿ’ ಸಿನಿಮಾಗಳೂ ಇಂದು ಬಿಡುಗಡೆಯಾಗಿವೆ. 

ಗೋಪಿಕಾ ಸುರೇಶ್, ಹೇಮಂತ್ ಕುಮಾರ್ 

‘ಆಲ್ಫಾ–ಮೆನ್‌ ಲವ್‌ ವೆಂಜೆಂನ್ಸ್‌’
‘ಗೀತಾ’, ‘ಗುರುದೇವ ಹೊಯ್ಸಳ’ ಚಿತ್ರಗಳನ್ನು ನಿರ್ದೇಶಿಸಿರುವ ವಿಜಯ್‌ ನಾಗೇಂದ್ರ ಅವರ ಸಿನಿಮಾವಿದು. ಸಿನಿಮಾವನ್ನು ಎಲ್‌.ಎ.ಪ್ರೊಡಕ್ಷನ್ಸ್‌ನಡಿ ಆನಂದ್‌ ಕುಮಾರ್‌ ನಿರ್ಮಿಸಿದ್ದು, ನಾಯಕನಾಗಿ ಹೇಮಂತ್‌ ಕುಮಾರ್‌ ನಟಿಸಿದ್ದಾರೆ. ಇವರಿಗೆ ಅಯಾನ ಹಾಗೂ ಗೋಪಿಕಾ ಸುರೇಶ್ ಜೋಡಿಯಾಗಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ‘ಬಿಗ್‌ಬಾಸ್‌’ ಖ್ಯಾತಿಯ ಕಾರ್ತಿಕ್ ಮಹೇಶ್ ವಿಶೇಷ ಪಾತ್ರದಲ್ಲಿದ್ದಾರೆ. ಅವಿನಾಶ್, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಬಾಲು ನಾಗೇಂದ್ರ, ಮಾನಸಿ ಸುಧೀರ್, ಗಿರಿರಾಜ್, ರಾಘು ಶಿವಮೊಗ್ಗ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.