ಎ ಫಾರ್ ಅಡ್ಡ, ಬಿ ಫಾರ್ ಬ್ಲೇಡ್, ಸಿ ಫಾರ್ ಚಮಕ್ಕು, ಡಿ ಫಾರ್ ಡೀಲಿಂಗ್ಸ್ ಎನ್ನುತ್ತಾ ರೌಡಿ ರೈಮ್ಸ್ ಹಾಡಿದ್ದಾರೆ ನಟ ಯುವ ರಾಜ್‌ಕುಮಾರ್. ‘ಎಕ್ಕ’ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದ್ದು, ರೌಡಿ ಏರಿಯಾದಲ್ಲಿ ಕುಳಿತು ಎಬಿಸಿಡಿಗೆ ಹೊಸ ಹಾಡು ಕಟ್ಟಿದ್ದಾರೆ ನಾಗಾರ್ಜುನ ಶರ್ಮಾ ಮತ್ತು ಚಿತ್ರದ ನಿರ್ದೇಶಕ ರೋಹಿತ್ ಪದಕಿ.
‘ಎಕ್ಕ’ ಸಿನಿಮಾ ಹಾಡುಗಳ ಮೂಲಕವೇ ಸದ್ಯ ಸದ್ದು ಮಾಡುತ್ತಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಹಾಗೂ ‘ಬ್ಯಾಂಗಲ್ ಬಂಗಾರಿ’ ಎಲ್ಲೆಡೆ ಗುನುಗುವಂತಾಗಿದೆ. ‘ರೌಡಿ ರೈಮ್ಸ್’ನಲ್ಲಿ ರೌಡಿಗಳ ಚಿತ್ರಣವೇ ಇದೆ. ಇದರಲ್ಲಿ ಎ ಟು ಝಡ್ ವಿಷಯವಿದೆ. ರೌಡಿಗಳ ಪದಕೋಶವನ್ನೇ ಇಲ್ಲಿ ಬಿಚ್ಚಿಟ್ಟಿದ್ದಾರೆ ನಾಗಾರ್ಜುನ ಶರ್ಮಾ ಹಾಗೂ ರೋಹಿತ್ ಪದಕಿ. ಆದರೆ ಝಡ್‌ಗೆ ಏನು ಎನ್ನುವ ಹೋಂವರ್ಕ್ ಅನ್ನು ಗ್ಯಾಂಗ್‌ಸ್ಟರ್ ಮಕ್ಕಳಿಗೆ ನೀಡಿದೆ ಚಿತ್ರತಂಡ. ಸಂಗೀತ ನಿರ್ದೇಶಕ ಚರಣ್ ರಾಜ್ ಇದಕ್ಕೆ ಪೂರಕವಾಗಿ ಸಂಗೀತ ನೀಡಿದ್ದಾರೆ. ಚರಣ್ ರಾಜ್ ಹಾಗೂ ರೋಹಿತ್ ಪದಕಿ ‘ರೌಡಿ ರೈಮ್ಸ್’ಗೆ ದನಿಯಾಗಿದ್ದಾರೆ.
ಬೆಂಗಳೂರು ಭೂಗತ ಜಗತ್ತಿನ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ಸಂಪದ ಹಾಗೂ ‘ಸಲಗ’ ಸಿನಿಮಾ ಖ್ಯಾತಿಯ ಸಂಜನಾ ಆನಂದ್ ನಾಯಕಿಯರಾಗಿ ನಟಿಸಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೊಸ್ ಹಾಗೂ ಜಯಣ್ಣ ಕಂಬೈನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ನಟಿಸಿದ್ದಾರೆ. ಬಾಲಿವುಡ್‌ನ ಅತುಲ್ ಕುಲಕರ್ಣಿ ಕೂಡ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.