ADVERTISEMENT

ಯುವ ರಾಜ್‌ಕುಮಾರ್‌ ನಟನೆಯ ‘ಎಕ್ಕ’ ಸಿನಿಮಾ ಜುಲೈ 18ಕ್ಕೆ ರಿಲೀಸ್‌

​ಪ್ರಜಾವಾಣಿ ವಾರ್ತೆ
Published 29 ಮೇ 2025, 23:30 IST
Last Updated 29 ಮೇ 2025, 23:30 IST
<div class="paragraphs"><p>ಯುವ&nbsp;ರಾಜ್‌ಕುಮಾರ್‌</p></div>

ಯುವ ರಾಜ್‌ಕುಮಾರ್‌

   

‘ರತ್ನನ್‌ ಪ್ರಪಂಚ’ ಖ್ಯಾತಿಯ ರೋಹಿತ್‌ ಪದಕಿ ನಿರ್ದೇಶನದ, ಯುವ ರಾಜ್‌ಕುಮಾರ್‌ ನಟನೆಯ ‘ಎಕ್ಕ’ ಸಿನಿಮಾ ಜೂನ್‌ 6ರ ಬದಲಾಗಿ ಜುಲೈ 18ರಂದು ತೆರೆಕಾಣಲಿದೆ ಎಂದು ಚಿತ್ರತಂಡ ಘೋಷಿಸಿದೆ. 

‘ಯುವ’ ಸಿನಿಮಾ ಬಳಿಕ ಯುವ ನಟಿಸಿರುವ ಸಿನಿಮಾ ಇದಾಗಿದೆ. ಈಗಾಗಲೇ ಟೀಸರ್‌ ಹಾಗೂ ಟೈಟಲ್‌ ಟ್ರ್ಯಾಕ್‌ ಮೂಲಕ ಚಂದನವನದಲ್ಲಿ ಸದ್ದು ಮಾಡಿದೆ ಈ ಸಿನಿಮಾ. ‘ಜಾಕಿ’ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಕಾಣಿಸಿಕೊಂಡಿದ್ದ ಸ್ಟೈಲ್‌ನಲ್ಲೇ ‘ಎಕ್ಕ’ ಸಿನಿಮಾದ ಟೀಸರ್‌ನಲ್ಲಿ ಯುವ ಕಾಣಿಸಿಕೊಂಡಿದ್ದರು. 

ADVERTISEMENT

ಬೆಂಗಳೂರು ಭೂಗತ ಜಗತ್ತಿನ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ಸಂಪದ ಹಾಗೂ ‘ಸಲಗ’ ಸಿನಿಮಾ ಖ್ಯಾತಿಯ ಸಂಜನಾ ಆನಂದ್ ನಾಯಕಿಯರಾಗಿ ನಟಿಸಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೊಸ್ ಹಾಗೂ ಜಯಣ್ಣ ಕಂಬೈನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.