ADVERTISEMENT

ಎರಡನೇ ಮಗುವಿನ ಸಂಭ್ರಮದಲ್ಲಿ ಇಶಾ

ಮತ್ತೆ ತಾಯ್ತನದ ಸಂಭ್ರಮದಲ್ಲಿ ಇಶಾ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 3:47 IST
Last Updated 12 ಜೂನ್ 2019, 3:47 IST
ಮೊದಲ ಮಗಳೊಂದಿಗೆ ಇಶಾ ಡಿಯೋಲ್
ಮೊದಲ ಮಗಳೊಂದಿಗೆ ಇಶಾ ಡಿಯೋಲ್   

ಇಶಾ ಡಿಯೋಲ್ ಮತ್ತು ಭರತ್ ತಕ್ತಾನಿ ದಂಪತಿಗೆ ಮತ್ತೊಂದು ಹೆಣ್ಣುಮಗು ಜನಿಸಿದೆ. ಈ ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಇಶಾ, ಮಗಳ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

ಪೋಸ್ಟರ್‌ನಲ್ಲಿ ಮಗಳ ಹೆಸರನ್ನೂ ಘೋಷಿಸಿರುವ ಇಶಾ, ಮಗಳಿಗೆ ತಮ್ಮ ಕುಟುಂಬಕ್ಕೆ ಸ್ವಾಗತ ಕೋರಿದ್ದಾರೆ. ಇಶಾ–ಭರತ್ ದಂಪತಿಗಳಿಬ್ಬರೂ ಸೇರಿ ಮಗಳಿಗೆ ‘ಮಿರಾಯ ತಕ್ತಾನಿ’ ಎನ್ನುವ ಹೆಸರಿಟ್ಟಿದ್ದಾರೆ. ಮೊದಲ ಮಗಳು ರಾಧ್ಯಾ ತಕ್ತಾನಿಗೆ ಈಗ ಅಕ್ಕನ ಸ್ಥಾನಕ್ಕೇರಿದ್ದಾಳೆ. ನಾವೀಗ ಇಬ್ಬರು ಪುತ್ರಿಯರ ಹೆಮ್ಮೆಯ ಅಪ್ಪ–ಅಮ್ಮಂದಿರು ಎಂದು ಇಶಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಮಗಳು ಹುಟ್ಟಿದ್ದನ್ನು ಸಂಭ್ರಮಿಸಿರುವ ಅಭಿಮಾನಿಗಳಿಗೆ ಇಶಾ ಧನ್ಯವಾದ ಸಲ್ಲಿಸಿದ್ದಾರೆ. ಮೇ ತಿಂಗಳಲ್ಲಿ ಇಶಾ ತಮ್ಮ ಕುಟುಂಬದೊಂದಿಗೆ ಸೀಮಂತ ಆಚರಿಸಿಕೊಂಡಿದ್ದರು. ಒಳ್ಳೆಯ ನೃತ್ಯಗಾರ್ತಿಯೂ ಆಗಿರುವ ಇಶಾ ಬಾಲಿವುಡ್‌ನಲ್ಲಿ ಅಮ್ಮ ಹೇಮಾಮಾಲಿನಿಯಂತೆ ದೊಡ್ಡ ನಟಿಯಾಗಿ ಗುರುತಿಸಿಕೊಳ್ಳಲಿಲ್ಲ. ಇಶಾ 2012ರಲ್ಲಿ ಉದ್ಯಮಿ ಭರತ್ ಅವರೊಂದಿಗೆ ಸಪ್ತಪದಿ ತುಳಿದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.