
‘ಫಿಟ್ ಇಂಡಿಯಾ ಆಂದೋಲನ’ದ ರಾಯಭಾರಿ ನಟ ಸೋನು ಸೂದ್ ವಿಭಿನ್ನ ಶೈಲಿಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಮುಂಬೈ, ನಾಗಪುರ, ದೆಹಲಿ, ಪಂಬಾಜ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಫಿಟ್‌ನೆಸ್ ಕ್ರೇಜ್ ಇರುವ 100ಕ್ಕೂ ಹೆಚ್ಚು ಜನರಿಗೆ ಅಲ್ಲಿರುವ ಅತ್ಯುತ್ತಮ ಜಿಮ್‌ಗಳಲ್ಲಿ ಒಂದು ವರ್ಷದ ಸದಸ್ಯತ್ವವನ್ನು ಉಚಿತವಾಗಿ ಕೊಡಿಸಿದ್ದಾರೆ.
‘ಫಿಟ್‌ನೆಸ್ ಕಾಳಜಿ ಇದ್ದರೂ ಹಣವಿಲ್ಲದೇ ಜಿಮ್‌ಗೆ ಹೋಗಲು ಸಾಧ್ಯವಾಗದ ಅನೇಕರಿಗೆ ಇದರಿಂದ ಪ್ರಯೋಜನ ಆಗಲಿದೆ. ಒಂದು ವರ್ಷ ಉಚಿತ ಸದಸ್ಯತ್ವ ಸಿಕ್ಕರೆ ಮುಂದಿನ ದಿನಗಳಲ್ಲಿ ಅವರು ವ್ಯಾಯಾಮ ಮುಂದುವರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಿಲ್ಲ’ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಸೋನು ಸೂದ್ ಹೇಳಿದ್ದಾರೆ.
‘ಆರೋಗ್ಯಕ್ಕಿಂತ ಹೆಚ್ಚಿನದು ಏನೂ ಇಲ್ಲ. ಎಲ್ಲರೂ ಫಿಟ್‌ನೆಸ್ ಕಾಯ್ದುಕೊಳ್ಳಲು ಪ್ರಯತ್ನಿಸಲೇಬೇಕು’ ಎನ್ನುವುದು ಅವರ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.