ADVERTISEMENT

ಲತಾ ಮಂಗೇಶ್ಕರ್ ಜನ್ಮದಿನ: ಅಗಲಿದ ಗಾಯಕಿ ಸ್ಮರಿಸಿದ ಅಭಿಮಾನಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2022, 5:37 IST
Last Updated 28 ಸೆಪ್ಟೆಂಬರ್ 2022, 5:37 IST
ಲತಾ ಮಂಗೇಶ್ಕರ್‌
ಲತಾ ಮಂಗೇಶ್ಕರ್‌   

ಮುಂಬೈ:ಖ್ಯಾತ ಗಾಯಕಿ ದಿವಂಗತ ಲತಾ ಮಂಗೇಶ್ಕರ್‌ ಅವರ ಜನ್ಮದಿನವಿಂದು (ಸೆ.28).ಅವರ ಅಭಿಮಾನಿಗಳು,ಸಂಗೀತಪ್ರೇಮಿಗಳುಲತಾ ಮಂಗೇಶ್ಕರ್‌ ಅವರ 93 ನೇ ಜಯಂತಿ ಪ್ರಯುಕ್ತ ಅವರಿಗೆ ನಮನಗಳನ್ನು ಸಲ್ಲಿಸುತ್ತಿದ್ದಾರೆ. ದೇಶದಾದ್ಯಂತ ಸಂಗೀತ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ಇನ್ನು ಅಯೋಧ್ಯೆಯಲ್ಲಿ 40 ಅಡಿ ಉದ್ದದವೀಣೆಯ ಪ್ರತಿಮೆಯನ್ನು ವೃತ್ತವೊಂದರಲ್ಲಿ ಸ್ಥಾಪಿಸಿ ಆ ವೃತ್ತಕ್ಕೆ ಲತಾ ಮಂಗೇಶ್ಕರ್ ಎಂದು ನಾಮಕರಣ ಮಾಡಲಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಲಿದ್ದಾರೆ.

ಲತಾ ಅವರನ್ನು ಮೋದಿ ಅವರು, ‘ಲತಾ ಭಾರತದ ಐಕಾನ್’ ಎಂದು ಕೊಂಡಾಡಿದ್ದಾರೆ.

ADVERTISEMENT

ಲತಾ ಮಂಗೇಶ್ಕರ್ ಅವರು ಕಳೆದ ಫೆ 6 ರಂದು 92ನೇ ವಯಸ್ಸಿನಲ್ಲಿ ನಿಧನರಾದರು. ಕೋವಿಡ್‌–19 ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಅವರು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ಜನವರಿ 8ರಂದು ದಾಖಲಾಗಿದ್ದರು.

ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಅವರು ಸುಮಾರು ಏಳು ದಶಕಗಳ ಕಾಲ ಹಿನ್ನೆಲೆ ಗಾಯಕಿಯಾಗಿ ಮನರಂಜಿಸಿದ್ದಾರೆ. 1942ರಿಂದ ಆರಂಭವಾದ ಅವರ ಗಾಯನ ಯಾನದಲ್ಲಿ 30,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಏ ಮೇರೆ ವತನ್‌ ಕೆ ಲೋಗೊ, ಲಗ್‌ ಜಾ ಗಲೇ, ಏಹ್‌ ಕಹಾ ಆಗಯೇ ಹಮ್‌ ಹಾಗೂ ಪ್ಯಾರ್‌ ಕಿಯಾ ತೊ ಡರ್ನಾ ಕ್ಯಾ,...ಸೇರಿದಂತೆ ಅವರ ನೂರಾರು ಹಾಡುಗಳು ಇವತ್ತಿಗೂ ಅಪಾರ ಜನಪ್ರಿಯತೆಯನ್ನು ಪಡೆದಿವೆ.

ಲತಾ ಮಂಗೇಶ್ಕರ್‌ ಅವರಿಗೆ ಭಾರತ ರತ್ನ, ಪದ್ಮ ವಿಭೂಷಣ, ಪದ್ಮ ಭೂಷಣ, ದಾದಾ ಸಾಹೇಬ್‌ ಫಾಲ್ಕೆ ಸೇರಿದಂತೆ ಹತ್ತು ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

ಪಂಡಿತ್‌ ದೀನಾನಾಥ್‌ ಮಂಗೇಶ್ಕರ್‌ ಅವರ ಹಿರಿಯ ಮಗಳಾಗಿ 1929ರ ಅಕ್ಟೋಬರ್‌ 28ರಂದು ಲತಾ ಜನಿಸಿದರು. ಅವರ ತಂದೆ ಮರಾಠಿ ಮೂಲದ ಗಾಯಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.