ADVERTISEMENT

ಖಳನಾಯಕಿ ಪಾತ್ರದಲ್ಲಿ ಖುಷ್ಬೂ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 14:08 IST
Last Updated 29 ಡಿಸೆಂಬರ್ 2019, 14:08 IST
ಖುಷ್ಬೂ
ಖುಷ್ಬೂ   

‘ಸೂಪರ್‌ ಸ್ಟಾರ್’ ರಜನಿಕಾಂತ್‌ ನಟನೆಯ ‘ತಲೈವರ್‌ 168’ ಚಿತ್ರದಲ್ಲಿ ನಟಿ ಮೀನಾ, ಖುಷ್ಬೂ ಹಾಗೂ ಕೀರ್ತಿ ಸುರೇಶ್‌ ನಟಿಸುವುದು ಖಚಿತವಾಗಿದೆ. ಈ ಚಿತ್ರದ ಶೂಟಿಂಗ್‌ ಈಗಾಗಲೇ ಆರಂಭವಾಗಿದ್ದು, ಹೈದರಾಬಾದ್‌ನಲ್ಲಿ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಭರದಿಂದ ಸಾಗಿದೆ.

ಈ ಸಿನಿಮಾದಲ್ಲಿ ನಟಿ ಖುಷ್ಬೂ ಅವರು ರಜನಿಕಾಂತ್‌ ಪತ್ನಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಸುದ್ದಿ ಇತ್ತು. ಆದರೆ ಈಗ ಈ ಸಿನಿಮಾದಲ್ಲಿ ಖುಷ್ಬೂ ಅವರದು ಖಳನಾಯಕಿ ಅಥವಾ ನೆಗಟಿವ್‌ ಪಾತ್ರ ಎಂದು ಚಿತ್ರತಂಡದ ಮೂಲಗಳು ಹೇಳಿಕೊಂಡಿವೆ.

ಈ ಚಿತ್ರದಲ್ಲಿ ಸುಮಾರು 25 ವರ್ಷಗಳ ನಂತರ ಮೀನಾ ಹಾಗೂ ಖುಷ್ಬೂ ಒಟ್ಟಿಗೆ ನಟಿಸುತ್ತಿದ್ದಾರೆ. ಮೂರು ಜನ ಖ್ಯಾತ ನಟಿಯರು ಈ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಈ ಚಿತ್ರದ ಕತೆ ಬಗ್ಗೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈಗ ಖುಷ್ಬೂ ಅವರು ನೆಗಟಿವ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಮತ್ತಷ್ಟು ಚಿತ್ರದ ಕುರಿತಾದ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಇದೇ ಮೊದಲ ಬಾರಿಗೆ ತಮ್ಮ ಸಿನಿಜೀವನದಲ್ಲಿ ಖುಷ್ಬೂ ಖಳನಾಯಕಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಜನಿಕಾಂತ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.

ADVERTISEMENT

ನಟ ಅಜಿತ್‌ಗೆ ಭಾರಿ ಗೆಲುವು ತಂದುಕೊಟ್ಟ ಸಿನಿಮಾ ‘ವಿಶ್ವಾಸಂ’ ನಿರ್ದೇಶಕ ಶಿವ ಅವರೇ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಆ ಚಿತ್ರದಂತೆ ಈ ಚಿತ್ರವನ್ನು ವಿಭಿನ್ನತೆಯಿಂದ ಮಾಡಲು ನಿರ್ಧರಿಸಿದ್ದಾರೆ. ಈ ಚಿತ್ರ ಕೌಟುಂಬಿಕ ಪ್ರಧಾನ ಚಿತ್ರ ಎಂದು ಚಿತ್ರತಂಡ ಹೇಳಿದೆ.

ಸೂರಿ ಹಾಗೂ ಸತೀಶ್‌ ಜೋಡಿ ಮತ್ತೊಮ್ಮೆ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಲು ಸಿದ್ಧವಾಗಿದೆ. ‘ಎಂದಿರನ್’ ಮತ್ತು ‘ಪೆಟ್ಟಾ’ ಸಿನಿಮಾ ನಿರ್ಮಿಸಿದ್ದ ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.‘ತಲೈವರ್‌ 168’ ತಾತ್ಕಾಲಿಕ ಹೆಸರಾಗಿದ್ದು, ಚಿತ್ರದ ಹೆಸರುಇನ್ನೂ ಅಂತಿಮವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.