ADVERTISEMENT

ನಟಿಯರು, ಹೆಣ್ಣು ಮಕ್ಕಳ ಉಡುಗೆ ಬಗ್ಗೆ ನಟಿ ಭಾರತಿ ವಿಷ್ಣುವರ್ಧನ್‌ ಬೇಸರ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 19:18 IST
Last Updated 7 ಮಾರ್ಚ್ 2022, 19:18 IST
ಭಾರತಿ ವಿಷ್ಣುವರ್ಧನ್‌
ಭಾರತಿ ವಿಷ್ಣುವರ್ಧನ್‌   

ಬೆಂಗಳೂರು: ‘ಯಾವತ್ತೂ ಹೆಣ್ಣು ಹೆಣ್ಣಾಗಿರಬೇಕು. ನಮ್ಮನ್ನು ನಾವು ಯಾವ ರೀತಿ ಬಿಂಬಿಸುತ್ತೇವೆಯೋ ಅದೇ ರೀತಿ ಗೌರವ ನಮಗೆ ಸಿಗುತ್ತದೆ. ನಾವೇ ಇನ್ನೊಬ್ಬರನ್ನು ಪ್ರಚೋದಿಸುವಂಥ ಉಡುಗೆ ತೊಟ್ಟರೆ, ಅವರನ್ನು ದೂಷಿಸಲು ಆಗುವುದಿಲ್ಲ. ನಮ್ಮನ್ನು ನಾವೇ ದೂಷಣೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ..’

ಹೀಗಂದವರುಖ್ಯಾತ ನಟಿ ಭಾರತಿ ವಿಷ್ಣುವರ್ಧನ್‌.13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೋಮವಾರ ನಡೆದ ಮಾತುಕತೆ ವೇಳೆ, ‘ಯುವ ನಟಿಯರಿಗೆ,ಹೆಣ್ಣುಮಕ್ಕಳಿಗೆ ಏನು ಕಿವಿಮಾತು ಹೇಳುತ್ತೀರಿ?’ ಎಂಬ ಪ್ರಶ್ನೆಯನ್ನು ನಟಿ ಅನು ಪ್ರಭಾಕರ್‌ಮುಂದಿಟ್ಟಾಗ ಭಾರತಿಯವರ ಉತ್ತರ ಹೀಗಿತ್ತು.

ಮಾತುಕತೆಗೂ ಮುನ್ನ ಭಾರತಿ ವಿಷ್ಣುವರ್ಧನ್‌ ಅವರ ಸಿನಿಮಾ,ಜೀವನ ಪಯಣಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರ ‘ಬಾಳೆ ಬಂಗಾರ’ ಪ್ರದರ್ಶನಗೊಂಡಿತು.

ADVERTISEMENT

ಪ್ರದರ್ಶನದ ಬಳಿಕ ನಡೆದ ಮಾತುಕತೆಯಲ್ಲಿ, ‘ಅತ್ಯುತ್ತಮ ನಟನೆಯ ಕೌಶಲ ಇರುವ ನಟಿಯರು, ಕಲಾವಿದರು ಪ್ರಸ್ತುತ ಚಿತ್ರರಂಗದಲ್ಲಿದ್ದಾರೆ. ಆದರೆ ಅವರ ಉಡುಗೆ ವಿಚಾರಕ್ಕೆ ನನ್ನ ವಿರೋಧವಿದೆ. ಈ ರೀತಿ ಉಡುಗೆ ತೊಟ್ಟವರನ್ನು ನೋಡಿದಾಗ ನನಗೆ ಮುಜುಗರ ಆಗುತ್ತದೆ.ಇವರಿಗೆ ಹೇಳುವವರೇ ಇಲ್ಲವೇ ಎನಿಸುತ್ತದೆ. ಇದಕ್ಕೆ ಪೋಷಕರು ಕಾರಣರಾಗುತ್ತಾರೆ. ಅವರು ಒಳ್ಳೆಯ ದಾರಿಯಲ್ಲಿ ಮಕ್ಕಳನ್ನು ನಡೆಸಬೇಕು. ಸಿನಿಮಾದಲ್ಲಿ ಒಂದು ಪಾತ್ರಕ್ಕಾಗಿ ಇಂಥ ಉಡುಗೆ ಹಾಕಿದರೆತೊಂದರೆ ಇಲ್ಲ. ಆದರೆ ಈ ರೀತಿ
ರಸ್ತೆಯಲ್ಲಿ ಹಾಕಿಕೊಂಡು ಹೋದರೆ ಹೇಗೆ. ಅದು ಬೇಸರ ತರಿಸುತ್ತದೆ’ ಎಂದು ಭಾರತಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.