ADVERTISEMENT

‘ಅಗ್ರಸೇನ’ನಿಗೆ ಡಾಲಿ ಬಲ!

​ಪ್ರಜಾವಾಣಿ ವಾರ್ತೆ
Published 11 ಜೂನ್ 2023, 19:55 IST
Last Updated 11 ಜೂನ್ 2023, 19:55 IST
ಚಿತ್ರತಂಡದೊಂದಿಗೆ ನಟ ಧನಂಜಯ್‌
ಚಿತ್ರತಂಡದೊಂದಿಗೆ ನಟ ಧನಂಜಯ್‌   

ಅಮರ್ ವಿರಾಜ್ ಹಾಗೂ ರಚನಾ ದಶರಥ್ ಜೋಡಿಯಾಗಿ ನಟಿಸಿರುವ ‘ಅಗ್ರಸೇನಾ’ ಚಿತ್ರದ ಟ್ರೇಲರ್‌ ಅನ್ನು ನಟ ಡಾಲಿ ಧನಂಜಯ ಇತ್ತೀಚೆಗೆ ಬಿಡುಗಡೆ ಮಾಡಿದರು.

ಜೂನ್‌.23ರಂದು ಚಿತ್ರ ತೆರೆಗೆ ಬರಲಿದ್ದು, ಈ ಹಿಂದೆ ‘ಭಜರಂಗಿ’ ಹರ್ಷ ಜೊತೆ ಕೆಲಸ ಮಾಡಿದ್ದ ಮುರುಗೇಶ್ ಕಣ್ಣಪ್ಪ ಈ ಚಿತ್ರ ನಿರ್ದೇಶಿಸಿದ್ದಾರೆ. ಮಮತಾ ಜಯರಾಮ ರೆಡ್ಡಿ ಚಿತ್ರದ ನಿರ್ಮಾಪಕರು. ಟ್ರೇಲರ್‌ ಬಿಡುಗಡೆಗೊಳಿಸಿ ಮಾತನಾಡಿದ ಡಾಲಿ ಧನಂಜಯ್‌, ‘ಇಡೀ ತಂಡ ಒಂದು ಒಳ್ಳೆಯ ಸಿನಿಮಾ ಮಾಡಿದೆ. ನಿರ್ದೇಶಕರು ನಮ್ಮ ಅರಸೀಕೆರೆಯವರು, ಒಂದು ಹೊಸ ತಂಡಕ್ಕೆ ಬೆಂಬಲ ನೀಡಲು ಇಲ್ಲಿಗೆ ಬಂದಿರುವೆ’ ಎಂದರು.

ಅಗಸ್ತ್ಯ ಬೆಳಗೆರೆ ಚಿತ್ರದ ಮತ್ತೋರ್ವ ನಾಯಕ. ಹಿರಿಯನಟ ರಾಮಕೃಷ್ಣ ಅವರು ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ‘ಹೊಸ ತಂಡಕ್ಕೆ ಪ್ರೋತ್ಸಾಹಿಸಿ, ಡಾಲಿ ಧನಂಜಯ ಅವರು ಆಗಮಿಸಿದ್ದು ಒಂದು ಶಕ್ತಿ ಬಂದಂತಾಯ್ತು. ವಿಜಯ ಪ್ರಕಾಶ್ ಚಿತ್ರದ ‘ದಸರಾ’ ಹಾಡನ್ನು ಬಿಡುಗಡೆ ಮಾಡಿದ್ದರು. ಶಿವರಾಜ್‌ಕುಮಾರ್‌ ಮತ್ತೊಂದು ಹಾಡಿಗೆ ಸಾಥ್‌ ನೀಡಿದ್ದರು. ಈಗ ಡಾಲಿ ಟ್ರೇಲರ್‌ ಬಿಡುಗಡೆ ಮಾಡಿಕೊಟ್ಟಿದ್ದಾರೆ’ ಎಂದು ಮಮತಾ ಜಯರಾಮ ರೆಡ್ಡಿ ಸಂತಸ ಹಂಚಿಕೊಂಡರು.

ADVERTISEMENT

ಚಿತ್ರಕ್ಕೆ ಎಂ.ಎಸ್.ತ್ಯಾಗರಾಜ್ ಸಂಗೀತ ನಿರ್ದೇಶನವಿದೆ. ಆರ್.ಪಿ.ರೆಡ್ಡಿ ಅವರ ಛಾಯಾಗ್ರಹಣ, ವಿಜಯ್ ಎಂ.ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.